ದೇವಾಡಿಗರ ಒಕ್ಕೂಟ (ರಿ. ) ಬೈಂದೂರು ಇದರ ವತಿಯಿಂದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

——-ಶ್ರೀ ಗಣೇಶ್ ಶೇರಿಗಾರ್
ದೇವಾಡಿಗರ ಒಕ್ಕೂಟ (ರಿ. ) ಬೈಂದೂರು ಇದರ ವತಿಯಿಂದ  ದೇವಾಡಿಗ ನವೋದಯ ಸಂಘ (ರಿ .)  ಬೆ0ಗಳೂರು ಇವರ  ಪ್ರಾಯೋಜಕತ್ವದಲ್ಲಿ ಸಮಾಜದ ಅರ್ಹ  ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಸತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ.ಹೆಚ್.ನಾರಾಯಣ ದೇವಾಡಿಗ ಹೊಸಾಡು    ಇವರು  ವಹಿಸಿದ್ದರು. ಗೌರವಾಧ್ಯಕ್ಷ ಶ್ರೀ.ಕೆ.ಜಿ .ಸುಬ್ಬ ದೇವಾಡಿಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು , ಸ್ಥ್ಹಾಪಕಾಧ್ಯಕ್ಷ  ನಾರಾಯಣ ದೇವಾಡಿಗರು ಸಂಘಟನೆ ಹಾಗೂ ಪುಸ್ತಕದ ಸದುಪಯೋಗಕ್ಕೆ ಕರೆ ಕೊಟ್ಟರು. ನೂತನ ಅಧ್ಯಕ್ಷರು ಎಲ್ಲರ ಸಹಕಾರ ಬಯಸಿದರು. ಮಹಿಳಾ ಘಟಕದ ಅಧ್ಯಕ್ಷೆ  ಶ್ರೀಮತಿ ಜಯಲಕ್ಶ್ಮಿ ಪಡುವರಿ , ಕಾರ್ಯದರ್ಶಿ  ಶ್ರೀಮತಿ ಶ್ಯಾಮಲ ಕೃಷ್ಣ ದೇವಾಡಿಗ, ಮಾಜಿ ಅಧ್ಯಕ್ಷೆ ಶ್ರೀಮತಿ ಮಾಲತಿ ಸುರೇಶ ದೇವಾಡಿಗ , ಬೈಂದೂರು ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ  ಶ್ರೀಮತಿ ಸುಶೀಲ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರೊ0ದಿಗೆ ಹಾಜರಿದ್ದರು. ಅತಿಥಿಗಳ ಸಮ್ಮುಖದಲ್ಲಿ ಪುಸ್ತಕಗಳನ್ನು ಹಂಚಲಾಯಿತು. ದೇವಾಡಿಗ ನವೋದಯ ಸಂಘ (ರಿ .) ಬೆ0ಗಳೂರಿನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಲಾಯಿತು. ಶಿಕ್ಷಕ ನಾರಾಯಣರಾಜು, ಮಹಾಲಿಂಗ ದೇವಾಡಿಗ ,ನಾರಾಯಣ ದೇವಾಡಿಗ ಕೋಣೂರು, ಮಣಿಕ0ಠ ದೇವಾಡಿಗ , ಚಂದ್ರ ದೇವಾಡಿಗ , ರಘುರಾಮ್ ಬೈಂದೂರ್, ನಟರಾಜ್ ,ವಾಸು ಹೇನಬೇರು ಇವರುಗಳು  ಹಿರಿಯ ಸದಸ್ಯ ಎಸ್.ಡಿ.ಹೇನಬೇರು ನೇತೃತ್ವದಲ್ಲಿ ಪುಸ್ತಕ ವಿತರಣಾ ಕಾರ್ಯವನ್ನು ನಡೆಸಿಕೊಟ್ಟರು . ನಾಗೇಶ್ ಹೇನಬೇರು, ಪಡುವರಿ ಪಂಚಾಯತ್ ಮಾಜಿ ಸದಸ್ಯ ನರಸಿ0ಹ ದೇವಾಡಿಗ ಹೇನಬೇರು  ವಿಶೇಷ ಸಹಕಾರ ನೀಡಿದರು.
                    ನಿರ್ಗಮನ ಕಾರ್ಯದರ್ಶಿ ಶ್ರೀ.ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯದರ್ಶಿ ಶ್ರೀ.ಸತ್ಯಪ್ರಸನ್ನ ವಂದಿಸಿದರು. ದೇವಾಡಿಗ ಒಕ್ಕೂಟದ ಹಿರಿಯ ಸಲಹಾ ಸಮಿತಿ ಸದಸ್ಯರು , ಉಪಾಧ್ಯಕ್ಷರು , ಖಜಾ0ಚಿ, ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ  ಮಹಿಳಾ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Skip to toolbar