ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

ದಿನಾಂಕ 17/06/2017 ರಂದು ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಇದರ ಸದಸ್ಯರಿ0ದ ಹೇನಬೇರು ಕಿರಿಯ ಪ್ರಾಥಮಿಕ ಶಾಲಾ ಭೇಟಿ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು .
      ಬೈಂದೂರು ಪಡುವರಿ ಗ್ರಾಮದ ಹೇನಬೇರು ಒಂದೊಮ್ಮೆ ಕುಗ್ರಾಮವೆನಿಸಿದ್ದು ಇದೀಗ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದೊ0ದಿಗೆ ಅಭಿವದ್ಧಿಯ ಪಥದತ್ತ ಸಾಗುತ್ತಿದೆ .ಒಕ್ಕಲುತನವನ್ನೆ ಆಶ್ರಯಿಸಿಕೊಂಡಿರುವ ಕೇವಲ ದೇವಾಡಿಗ ಕುಟು0ಬಗಳಷ್ಟೆ ಇಲ್ಲಿ  ವಾಸಿಸುತ್ತಿರುವುದು ಉಲ್ಲೇಖನೀಯ. ಈ ಭಾಗದಲ್ಲಿರುವ ಏಕೈಕ ಶಾಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇನಬೇರು.
      ಸಮಾರ0ಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ. ಹೆಚ್ .ನಾರಾಯಣ ದೇವಾಡಿಗ ಹೊಸಾಡು  ಇವರು ವಹಿಸಿದ್ದರು . ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ  ಅಧ್ಯಕ್ಷರಾದ  ಶ್ರೀ.ವೆ0ಕಟರಮಣ ಹೆಚ್  , ಉಪಾಧ್ಯಕ್ಷೆ ಶ್ರೀಮತಿ ರಾಧಾ , ಒಕ್ಕೂಟದ ಕಾರ್ಯದರ್ಶಿ ಶ್ರೀ.ಸತ್ಯಪ್ರಸನ್ನ ,ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಡುವರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ.ನರಸಿ0ಹ ದೇವಾಡಿಗ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಶ್ರೀ.ವೆ0ಕಟರಮಣ ಹೆಚ್  ಒಕ್ಕೂಟದ ಸದಸ್ಯರನ್ನು ಪುಷ್ಪ ನೀಡಿ ಸ್ವಾಗತಿಸಿ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಗ್ರಾಮಸ್ಥರು ಪಟ್ಟ ಪಾಡನ್ನು ವಿವರಿಸುತ್ತ ವಿಧ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಹಾಗೂ ದಾನಿಗಳ ಹೆಚ್ಚಿನ ಸಹಕಾರವನ್ನು ಬಯಸಿದರು. ಒಕ್ಕೂಟದ ಕಾರ್ಯಕ್ರಮವನ್ನು ಶ್ಲಾಘಿಸಿದರು. ದೇವಾಡಿಗ ನವೋದಯ ಸಂಘ (ರಿ.) ಬೆ0ಗಳೂರು ಇವರಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯದರ್ಶಿ ಶ್ರೀ.ಸತ್ಯಪ್ರಸನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತ  ನೋಟ್ ಬುಕ್ ಅನ್ನು ವಿತರಿಸಲಾಯಿತು. ಒಕ್ಕೂಟದ ಹಿರಿಯ ಸಲಹಾ ಸಮಿತಿ ಸದಸ್ಯ ಶ್ರೀ.ಎಸ್.ಡಿ.ಹೇನಬೇರ್ ಪುಸ್ತಕ ವಿತರಣಾ ಉಸ್ತುವಾರಿ ವಹಿಸಿದ್ದರು .  ಪ್ರಾಯೋಜಕರಾದ ದೇವಾಡಿಗ ನವೋದಯ ಸಂಘ (ರಿ.) ಬೆ0ಗಳೂರು  ಹಾಗೂ ಸಹಕಾರ ನೀಡಿದ ಒಕ್ಕೂಟದ ಮಾಜಿ ಕಾರ್ಯದರ್ಶಿ  ಶ್ರೀ.ರಾಘವೇ0ದ್ರ ದೇವಾಡಿಗ ಇವರಿಗೆ  ಒಕ್ಕೂಟ ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಒಕ್ಕೂಟದ  ಅಧ್ಯಕ್ಷರು ಮಾತನಾಡುತ್ತಾ  ಮು0ದಿನ ದಿನಗಳಲ್ಲಿ ಹೆಚ್ಚಿನ ಸಹಕಾರದ ಭರವಸೆಯನ್ನು ನೀಡುತ್ತ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವತ್ತ ಗಮನಹರಿಸುವಂತೆ ಸಲಹೆ ನೀಡಿದರು. ಗ್ರಾಮದ ಮುಖಂಡರಾದ ಶ್ರೀ.ನರಸಿ0ಹ ದೇವಾಡಿಗ , ಮಂಜುನಾಥ ದೇವಾಡಿಗ , ಎಸ್ ಡಿಎಮ್ ಸಿ ಸದಸ್ಯೆಯರಾದ ಶಶಿಕಲ , ಭಾರತಿ , ಸುಶೀಲ ಇವರು ಭಾಗವಹಿಸಿದ್ದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ.ರಘುರಾಮ್ ಬೈಂದೂರ್, ಶ್ರೀ.ಗುರುಪ್ರಕಾಶ್ ಸಭೆಯಲ್ಲಿ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ.ನರಸಿ0ಹ ದೇವಾಡಿಗರು ವಂದಿಸಿದರು.
     ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮ ಭೇಟಿ ಮಾಡಲಾಯಿತು. ಸಮಾಜ ಬಂಧುಗಳು ನಡೆಸುತ್ತಿದ್ದ ಕೃಷಿ ನಾಟಿಯನ್ನು ವೀಕ್ಷಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು. ಗ್ರಾಮಸ್ಥರ ಬೀಳ್ಕೊಡುಗೆಯೊ0ದಿಗೆ  ಕಾರ್ಯಕ್ರಮ ಸ0ಪನ್ನಗೊ0ಡಿತು.

Leave a Reply

Your email address will not be published. Required fields are marked *

Skip to toolbar