ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ, ಆರೋಗ್ಯ ರಕ್ಷಣೆಯ ಸಮಗ್ರ ಮಾಹಿತಿ ದೊರೆಯುವುದಲ್ಲದೇ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮಂಜು ದೇವಾಡಿಗ
ಬ್ಯೆಂದೂರು: ಜೆ.ಸಿ.ಐ ಉಪ್ಪುಂದ, ದೇವಾಡಿಗ ಸಂಘ(ರಿ.)ಉಪ್ಪುಂದ,ಗ್ರಾಮೀಣ ವಿಕಾಸ ಸಮಿತಿ ಉಪ್ಪುಂದ, ಶ್ರೀಮೂಡುಗಣಪತಿ ಶಿಶುಮಂದಿರ ಉಪ್ಪುಂದ,ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಿತು.ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಮಂಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಯ ಸಮಗ್ರ ಮಾಹಿತಿ ದೊರೆಯುವುದಲ್ಲದೇ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ವೇದಿಕೆಯಲ್ಲಿ ಉಪ್ಪುಂದ ಜೇಸಿ ಅಧ್ಯಕ್ಷ ಮಂಜುನಾಥ ದೇವಾಡಿಗ,ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಪ್ರಸನ್ನ ಕುಮಾರ್ ಉಪ್ಪುಂದ,ಪ್ರಸಾದ ಪ್ರಭು ಶಿರೂರು ಮೊದಲಾದವರು ಉಪಸ್ಥಿತರಿದ್ದರು.
:-ಪುರುಷೋತ್ತಮ ದಾಸ್ ಉಪ್ಪುಂದ

Leave a Reply

Your email address will not be published. Required fields are marked *

Skip to toolbar