ನವಿ ಮುOಬೈ ದೇವಾಡಿಗ ಭವನದಲ್ಲಿ ನವಿ ಮುOಬೈ ಪ್ರದೇಶಿಕ ಸಮಿತಿಯಿಂದ "ಆಷಾಡದಲ್ಲೋಂದು ದಿನ ಸ್ನೇಹ ಸಮ್ಮಿಲನ" ಆಯೋಜನೆ.

ದೇವಾಡಿಗ ಭವನದಲ್ಲಿ ನವಿಮುOಬೈ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ಇವರು ನಿನ್ನೆ ಆಷಾಡ ಮಾಸದ ಅಂಗವಾಗಿ ಸ್ನೇಹ ಸಮ್ಮಿಲನ ಆಯೋಜಿಸಿದ್ದರು.ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ  ಶ್ರೀ ಪ್ರಭಾಕರ ದೇವಾಡಿಗರು ಆಷಾಡ ತಿಂಗಳಿನ ಮತ್ತು ಆಷಾಡ ಅಮಾವಾಸ್ಯೆಯ ಬಗ್ಗೆ ,ಶ್ರಾವಣ ಮಾಸದ ಬಗ್ಗೆ  ತುಳು ಕನ್ನಡಿಗರು ಹಿOದೆ ಆಚರಿಸುತ್ತಿದ್ದ ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಪ್ರಾದೇಶಿಕ ಸಮಿತಿಯು ಹೀಗೆಯೇ ಸಣ್ಣ ಸಣ್ಣ ಕಾರ್ಯಕ್ರಮಗಳು ಸದಸ್ಯರ ಪರಸ್ಪರ ಭಾಂಧವ್ಯ ಹೆಚ್ಚಿಸುವು ದಲ್ಲದೆ, ಸಮಿತಿಗಳ ಸದಾ ಕ್ರಿಯಾಶೀಲವಾಗಿರುವುದನ್ನು ತೋರಿಸುತ್ತದೆ ಎOದರು.ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮಾತನಾಡುತ್ತಾ ಇಂತಹ ಆಷಾಡದ ಕಾರ್ಯಕ್ರಮಗಳು ಇಂದಿನ ಗ್ಲೋಬಲ್ ಯುಗದಲ್ಲಿ ತುಳು ಕನ್ನಡಿಗರ ಸಂಸ್ಕ್ರತಿಯನ್ನು ಜೀವಂತವಾಗಿಡುವಲ್ಲಿ ಸಹ಼ಕಾರಿಯಾಗುತ್ತದೆ ಮಾತ್ರವಲ್ಲ ಇಂದಿನ ಜನಾOಗಕ್ಕೆ ನಮ್ಮ ಸಂಸ್ಕ್ರತಿಯ ಮಾಹಿತಿ ನೀಡುತ್ತದೆ ಅಂದರು.ಸಂಘದ ಮಾಜಿ ಅಧ್ಯಕ್ಷ ರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ವೈದ್ಯ ಕೀಯ ಮತ್ತು ಸಾಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ ಸಂದರ್ಭೋಚಿತವಾಗಿ ಮಾತನಾಡಿದರು.ಅಲ್ಲದೆ ಮಾಜಿ ಕಾರ್ಯಾಧ್ಯಕ್ಷರಾದ ಪಿ ವಿ ಎಸ್ ಮೊಯಿಲಿ,ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತೀ ದೇವಾಡಿಗ ಆಷಾಡ ಮಾಸದ ಬಗ್ಗೆ ಮಾಹಿತಿ ನೀಡಿದರು.ಮರಾಟಿ ಸಿನಿಮಾದಲ್ಲಿ ಕಿರು ಪಾತ್ರದಲ್ಲಿ ಅಭಿನಯಿಸುತ್ತಿರುವ ದೇವಾಡಿಗ ಸಂಘದ ಮಾಜಿ ಜತೆ ಕೋಶಾಧಿಕಾರಿ,ಕಲಾವಿದ  ಶ್ರೀ ರಮೇಶ ದೇವಾಡಿಗರನ್ನು ಅಭಿನಂದಿಸಲಾಯಿತು.ನಂತರ ನಮ್ಮ ಶ್ರೀ ಗಿರೀಶ್ ಕೇಶವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಒಟ್ಟಾರೆಯಾಗಿ  ಕಾರ್ಯಕ್ರಮದಿOದ ಸದಸ್ಯರೇಲ್ಲರು ಸ್ನೇಹ ಸೌಹಾರ್ದತೆಯ ಸಿಂಚನದ ಸವಿಯನ್ನುOಡು ಮನೆಗೆ ತೆರಳಿದರು.ಗಣೇಶ್ ಎಸ್ ಬ್ರಹ್ಮಾವರ್ವಾಶಿ ,ನವಿ ಮುOಬೈ 

Leave a Reply

Your email address will not be published. Required fields are marked *

Skip to toolbar