ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ
ಗುರುವಾರ ನಾಗರ ಪಂಚಮಿಯ ದಿನದಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನೆಡೆಯಿತು

ಈ ಕಾರ್ಯಕ್ರಮದಲ್ಲಿ ನಾಗಸ್ವರ ವಾದನದಲ್ಲಿ ಪರಿಣಿತರಾಗಿ ರಾಜ್ಯ ವಿವಿದೆಡೆಗಳಲ್ಲದೇ ಅನ್ಯ ರಾಜ್ಯದಲ್ಲಿಯೂ ತನ್ನ ಕಲಾ ನೈಪುಣ್ಯತೆಯನ್ನು ಮೆರೆದ ಶ್ರೀ ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಅವರಿಗೆ ಗಣ್ಯರ ಸಮ್ಮಖದಲ್ಲಿ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ  ಬಿ.ಎಮ್. ಸುಕುಮಾರ್ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿ ಕೊಲ್ಲೂರು ವಹಿಸಿದ್ದರು ಉದ್ಘಾಟನೆಯನ್ನು  ತಿಮ್ಮ.ವಿ. ದೇವಾಡಿಗ ಧರ್ಮದರ್ಶಿಗಳು  ಶ್ರೀ ಸುಬ್ರಮಣ್ಯ  ದೇವಸ್ಥಾನ    ಮರವಂತೆ  ನೆರವೇರಿಸಿದರು

ಮುಖ್ಯಅತಿಥಿಗಳಾಗಿ  ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ರಾಮಚಂದ್ರ ಹೆಬ್ಬಾರ್, ನಾಗೇಶ್ ಹೆಬ್ಬಾರ್ ಉದ್ಯಮಿ ಮರವಂತೆ ಪುರುಷೋತ್ತಮ್ ದಾಸ್ ಉಪ್ಪುಂದ
ಪ್ರಕಾಶ್ ದೇವಾಡಿಗ ಕುದ್ರೊಕೋಡು,  ಉಪಸ್ಥಿತರಿದ್ರು.

ಜೆ.ಪಿ ಬಡಾಕೆರೆ ಸ್ವಾಗತಿಸಿದರು, ಪ್ರಸನ್ನ ಮರವಂತೆ ಧನ್ಯವಾದಗೈದುರು, ಪೂರ್ಣಿಮಾ ಆಚಾರ್ಯ ನಿರೂಪಿಸಿದರು.

Leave a Reply

Your email address will not be published. Required fields are marked *

Skip to toolbar