ಭಾರತದಲ್ಲಿ ವೈಚಾರಿಕತೆ ಪ್ರಶ್ನಿಸುವುದು ತಪ್ಪೇ ?

ಅಂದು  ಶ್ರೀ ದಾಬೋಲ್ಕರ್, ನಿನ್ನೆ ಶ್ರೀ ಕಲಬುರ್ಗಿ, ಶ್ರೀ ಜೆಡೇ ( ಮಿಡ್ ಡೇ ಪತ್ರಿಕೆ ಮುOಬೈ ) ,ಶ್ರೀ ಮಂಜುನಾಥ್ ಆರ್ ಟಿ ಐ ಕಾರ್ಯಕರ್ತ,ಇಂದು ಶ್ರೀಮತಿ ಗೌರಿ ಲಂಕೇಶ್ ಹತ್ಯೆಯಾಗಿರುವುದು ಬರೇ ವ್ಯವಸ್ಠೇ ಯಲ್ಲಿನ ಅವ್ಯವಸ್ಠೇ  ಭ್ರಸ್ಟಾಚಾರ, ಅನ್ಯಾಯ ,ಅಸಮಾನತೆಗಳನ್ನು ಪ್ರಶ್ನಿಸಿದಕ್ಕಾಗಿ.ಓದುಗರೇ ನಮಗೆ ಸOವಿಧಾನ ಅನ್ಯಾಯ  ಭ್ರಸ್ಟಾಚಾರ ನಡೆದಾಗ ಎದುರಿಗಿರುವ ವ್ಯಕ್ತಿ ಎಸ್ಟೇ ಬಲಶಾಲಿಯಾಗಿದ್ದರು ಅದನ್ನು ಬಯಲಿಗೆಳೆವ ಹಾಗು ಪ್ರತಿಭಟಿಸುವ ಹಕ್ಕನ್ನು ನೀಡಿವೆ.ಅದನ್ನು ಹತ್ತಿಕ್ಕುವ ಹಕ್ಕು  ಯಾರಿಗೂ ಇಲ್ಲ.ಆದರೆ ಇಂದು ನಮ್ಮ ದೇಶದಲ್ಲಿ ಅಧಿಕಾರಕ್ಕಾಗಿ, ಸತ್ಯದ ದಮನಕ್ಕಾಗೀ ಮನುಜ  ಮನುಜನನ್ನೇ ಕೊಲ್ಲುವ ಮಾಟ್ಟಿಗೇ ತಲುಪಿದ್ದಾನೆ.ಎಂಜಲು ಕಾಸೀಗೋಸ್ಕರ ಮನುಷ್ಯ ಪಟ್ಟಭದ್ರಹಿತಾಸಕ್ತಿಗಳ ದಾಸನಾಗಿದ್ದಾನೆ.ಈ ಹಿOದೆ ನಾನೋಂದು ಸ್ವಂತಿಕೆ ಮರೆತ ಜನ ಎOಬ ಲೇಖನ ಬರೇದಿದ್ದೆ. ಜನ ತಮ್ಮ ಸ್ವಂತಿಕೆ ಮರೆತು ಅಂದರೆ ಯಾವುದು ಸರಿ ಯಾವುದು ತಪ್ಪು ಎOಬ ವಿಚಾರವನ್ನು ಮಾಡದೆ ಅಧಿಕಾರಿಶಾಹಿಗಳ,ಬಂಡವಾಳ ಶಾಹಿಗಳ , ಧನವಂತರ, ರಾಜ ಕಾರಿಣಿಗಳ  ಕೈಗೊOಬೆಯಾಗಿರುವುದು ಇಂದಿನ ಎಲ್ಲಾ ಅನಁರ್ಥಗಳಿಗೆ ಕಾರಣ.ಇದು ದೊಡ್ದಮಟ್ಟದಲ್ಲಿ  ಕೊಲೆಯಲ್ಲಿ ಅಂತ್ಯ ಕಂಡರೆ ಇನ್ನು ಸಣ್ಣ ಮಟ್ಟದಲ್ಲಿ ಅಂದರೆ ಸಣ್ಣ ಸಣ್ಣ ಸಂಘಟನೆಗಳಲ್ಲಿ ಸತ್ಯ ವಿಚಾರಗಳನ್ನು ಎತ್ತಿ ಮುOದಿಟ್ಟಾಗ ಆ ಸಂಘಟನೆಯ ಮುಖ್ಯಸ್ಠರೇನಿಸಿ ಕೊOಡವರು ಆ ಸತ್ಯ ವಿಚಾರ ಯಾ ಸಲಹೆ ನೀಡಿದವನ ವಿಚಾರಗಳನ್ನು ಸರಿಯಾಗಿ ಅರ್ಥೈಸದೆ ಆತನನ್ನು ಆದಸ್ಟು  ಸಂಘಟನೆಯಿಂದ ದೂರವಿರಿಸಿ  ,ಮೆಟ್ಟಿ ದಬಾಯಿಸಿಡುತ್ತಾರೆ.ಇನ್ನು ಜನ    ಹೊಗಳು ಭಟರಂತೆ,ಚಮಚಾಗಿರಿ ಮಾಡುತ್ತಾ  ಕುರಿ ಮಂದೆಯಂತೆ ಸಾಗುವಾಗ ಇವರು ಮಾನಸಿಕವಾಗಿ ಇನ್ನೂ  ಇಂಗ್ಲಿಷರ  ಜಮಾನದ ಗುಲಾಮರಾಗಿರುವುದನ್ನು ತೋರಿಸುತ್ತದೆ. ಓದುಗರೇ ನೇರ ದಿಟ್ಟ ಪತ್ರಕರ್ತರ, ಆರ್  ಟಿ ಐ ಸಮಾಜ ಸೇವಕರ,ಪ್ರಗತಿಪರ ಚಿಂತಕರ ,ವಿಚಾರವಾದಿಗಳ ಹತ್ಯೆ ಖಂಡನೀಯ.ಇಂತರ ಹತ್ಯೆಗಳ ವಿರುದ್ದ ಜನತೆ ಒಂದಾಗಿ ಪ್ರತಿಭಟಿಸದೆ ಹೋದಲ್ಲಿ ಪುನಃ ಮಗದೊಮ್ಮೆ ಭಾರತ ಗುಲಾಮರಾಗುವುದರಲ್ಲಿ ಸOಶಯವೇ ಇಲ್ಲ. ಜನ ಈಗಲೂ ಎಚ್ಚತ್ತು ಸ್ವಂತ ಚಿಂತನೆಯಂತೆ ನಡೆಯದಿದ್ದರೆ,ಆಗುತ್ತಿರುವ ಎಲ್ಲಾ ಅನಾಚಾರಗಳಿಗೆ ಕಸ್ಟ ನಸ್ಟಗಳಿಗೆ ಜನತೆಯೆ ಜವಾಬ್ದಾರರಾಗುತ್ತಾರೆ.
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Leave a Reply

Your email address will not be published. Required fields are marked *

Skip to toolbar