ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು ನೂತನ ಮಹಿಳಾ ವಿಭಾಗದ ಉದ್ಘಾಟನೆ.

ಸಮಾಜ ಭಾಂಧವರಿಗೆ  ನಿರಂತರ  ಸ್ಪಂದನೆಯಿಂದ ಮಾತ್ರ  ಸಂಘಟನೆ ಯಶಸ್ವಿಯಾಗಲು ಸಾಧ್ಯ  
— ಗಣೇಶ್ ಶೇರಿಗಾರ್ 


ತೀರ್ಥಳ್ಳಿ: ದೇವಾಡಿಗ ಸಂಘ ಮುOಬೈ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ತೀರ್ಥಳ್ಳಿಯ ದೇವಾಡಿಗ ಸಂಘದ  ತಾ 29  ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 21ನೆಯ ಶತಮಾನದ ಈಗಿರುವ  ದೇವಾಡಿಗರೆಲ್ಲರು ಒಗ್ಗೂಡಿ ಶ್ರೀ  ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತಾವು ತನು ಮನ ಧನದ ಮೂಲಕ ತೊಡಗಿಸಿಕೊOಡು ಭವೀಶ್ಯತ್  ಕಾಲದಲ್ಲಿ ಇತಿಹಾಸದ ಪುಟಕ್ಕೆ ಸೇರ್ಪಡೆಯಾಗೋಣವೆOದು ತೀರ್ಥಳ್ಳಿಯ ದೇವಾಡಿಗ ಭಾಂಧವರನ್ನು  ವಿನಂತಿಸಿದರು. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶ್ರೀ ಸತ್ಯನಾರಾಯಣ ಪೂಜೆ ಆರOಭಗೊOಡಿತು.ಪೂಜಾವಿಧಿಯನ್ನು ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್ ದೇವಾಡಿಗ ದOಪತಿಗಳು ಪೂರೈಸಿದರು. ಸಂಘದ ಸ್ವಂತ ಜಾಗಕ್ಕಾಗಿ ಸುಮಾರು 23 ವರ್ಷಗಳ ಹೋರಾಟ ನಡೆಸಿ ಈಗ ಅವರದೆ ಆದ ಒಂದು ಎಕ್ರೆ  ಜಾಗವಾದ ತೀರ್ಥಳ್ಳಿಯ ಕುಶವತಿ ನಗರದಲ್ಲಿನ ಇವರ ಪ್ರಪಥಮ ಕಾರ್ಯಕ್ರಮವಾಗಿತ್ತು.ಪೂಜಾವಿಧಿಯ  ನOತರ 11.30 ಗೆ ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು  ಸಂಘದ  ಮಹಿಳಾ ವಿಭಾಗದ ಉದ್ಘಾಟನೆಯನ್ನು ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಬಾರ್ಕೂರು ಇದರ ವಿಶ್ವಸ್ಥರಾದ ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೆ, ಶ್ರೀ ರಘುರಾಮ್ ದೇವಾಡಿಗ ಆಲೂರು, ದೇವಾಡಿಗ ಸಂಘ ಮುOಬೈ ಯ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗ  ತೀರ್ಥಳ್ಳಿ ದೇವಾಡಿಗ ಸಂಘದ ಗೌರವಾಧ್ಯಕ್ಶ ಶ್ರೀ ಅನಂತ ದೇವಾಡಿಗ , ಸಂಘದ  ಅಧ್ಯಕ್ಷ ಶ್ರೀ ಗಣೇಶ್ ಪ್ರಸಾದ ದೇವಾಡಿಗ, ಗೌರವ ಪ್ರಧಾನ  ಕಾರ್ಯದರ್ಶಿ ಶ್ರೀ ಸಂತೋಶ್ ದೇವಾಡಿಗ , ತೀರ್ಥಳ್ಳಿಯ  ಕೌನ್ಸಿಲರ್ ಶ್ರೀ ನವೀನ್ ದೇವಾಡಿಗರು  ತೀರ್ಥಳ್ಳಿ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯ ಪದ್ಮನಾಭ ದೇವಾಡಿಗರು ನೆರೆವೇರಿಸಿದರು. ಇಲ್ಲಿ ಗಣಹೋಮ ನಡೆಯುವಾಗ ಹೋಮಕುಂಡದ ಬೆOಕಿ ಜ್ವಾಲೆ ಶ್ರೀ ಆಂಜನೇಯ ಸ್ವಾಮಿಯ ಪ್ರತಿಕ್ರತಿಯಂತೆ ಗೋಚರಿಸಿದ್ದು ಚಮತ್ಕಾರವೆನಿಸಿ ದೇವಾಡಿಗ ಭಂಧುಗಳು ರೋಮಾಂಚನಗೊOಡರು. ಅಲ್ಲದೆ ಕಾಕತಾಳಿಯವೋ ಎOಬOತೆ ಸಂಘದ ಕಚೇರಿಯ ಎದುರಿನಲ್ಲಿ ಶ್ರೀ ಆಂಜನೇಯ ದೇವಾಸ್ಥಾನ ಇದ್ದು ಹೋಮಕುOಡದಲ್ಲಿ ಶ್ರೀ  ಆಂಜನೇಯ ಸ್ವಾಮಿಯOತೆಯೆ ಪ್ರತಿಕ್ರತಿ ಗೋಚರವಾಗಿದದ್ದು ಎಲ್ಲರಿಗೂ ಶ್ರೀ ಸ್ವಾಮಿಯ ಅನುಗ್ರಹವಾದಂತಾಗಿದೆ.
ತದನಂತರ ದೇವಾಡಿಗ ಇಬ್ಬರು ಮಿಲಿಟರಿ ಯೋಧರಾದ ತೀರ್ಥಳ್ಳಿಯ ಶ್ರೀ ಪ್ರಶಾಂತ ದೇವಾಡಿಗ ಮತ್ತು ಶ್ರೀ ಸುಧಾಕರ ದೇವಾಡಿಗರನ್ನು ಗೌರವಿಸಿ ಸತ್ಕರಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆಮೇಲೆ ಬಂದಿದ್ದ ಅತಿಥಿಗಳಾದ ಶ್ರೀ ಜನಾರ್ಧನ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೆ, ಶ್ರೀ ರಘುರಾಮ್ ದೇವಾಡಿಗ ಆಲೂರು, ಶ್ರೀ ಗಣೇಶ್ ಶೇರಿಗಾರ್ ಮುOಬೈ, ಶ್ರೀ ಸೀತಾರಾಮ್ ದೇವಾಡಿಗ ಉಡುಪಿ, ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ, ಶ್ರೀ ನಿತ್ಯಾನಂದ ದೇವಾಡಿಗ ನಿಟ್ಟೂರು, ಶ್ರೀ ಕೃಷ್ಣ ದೇವಾಡಿಗ ಉಡುಪಿ, ಶ್ರೀ ರತ್ನಾಕರ ಶೇರಿಗಾರ್ ಉಡುಪಿ, ಶಂಕರನಾರಾಯಣ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ , ಶಿವಮೋಗ್ಗ ದೇವಾಡಿಗ ಸಂಘದ ಉಪಾಧ್ಯಕ್ಷ ಶ್ರೀ ವಾಸು ದೇವಾಡಿಗ ,ಶಿವಮೋಗ್ಗ  ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ದೇವಾಡಿಗ , ಶ್ರೀ ಅಂಜಲಿ ದೇವಾಡಿಗ ಬ್ರಹ್ಮಾವರ, ಉಮಾ ದೇವಾಡಿಗ ಬಾರಕೂರು ಇವರನ್ನು ಸತ್ಕರಿಸಿ ಗೌರವಿಸಿದರು. ಗೌರವ ವಂದನೆಯ ನಂತರ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ವಿಶ್ವಸ್ಠರಾದ ಶ್ರೀ ಜನಾರ್ದನ ದೇವಾಡಿಗ ಬಾರ್ಕೂರು, ಶ್ರೀ ನರಸಿಂಹ ದೇವಾಡಿಗರು ಬಾರ್ಕುರಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ಸOಪೂರ್ಣ ವಿವರಣೆ ನೀಡಿದರು.ವಿಶ್ವಸ್ತರಾದ ಶ್ರೀ ರಘುರಾಮ್ ದೇವಾಡಿಗ ಆಲೂರು, ಉಡುಪಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ ಸಂಧರ್ಭೋಚಿತವಾಗಿ ಮಾತನಾಡಿದರು.ಎಲ್ಲಕ್ಕಿOತ ಹೆಚ್ಚಾಗಿ ಅಚ್ಚುಕಟ್ಟಾಗಿ ಸOಪೂರ್ಣ ಸಮಾರOಭ ನಡೆಸಿಕೊಟ್ಟ ತೀರ್ಥಳ್ಳಿಯ ಸಂಘದ ಎಲ್ಲ ಯುವ ಪಧಾಧಿಕಾರಿಗಳು ಇಡೀ ದೇವಾಡಿಗ ಯುವ ಪೀಳಿಗೆಗೆ ಮಾದರಿ ಎನಿಸಿದ್ದು ಹೆಮ್ಮೆಯೆನಿಸಿತು. ಶ್ರೀ ರಾಘವೇಂದ್ರ ದೇವಾಡಿಗರ ಕಾರ್ಯಕ್ರಮದ  ನಿರೂಪಣೆ  ಮನ ಮೋಹಕವಾಗಿತ್ತು.ಸರಿ ಸುಮಾರು 350ಕ್ಕೊ ಹೆಚ್ಚು ದೇವಾಡಿಗ ಭಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

Skip to toolbar