ಬಿ ಜೆ ಪಿ ಗೆ ಕರ್ನಾಟಕದ ಚುನಾವಣೆ ಕಬ್ಬಿಣದ ಕಡಲೆಯಾಗಬಹುದೇ ?

ಕರ್ಣಾಟಕದ ಮುOಬರುವ ವಿಧಾನಸಭಾ ಚುನಾವಣೆಯOತೂ ತ್ರಿಕೋನ  ಸರಣಿಯಾಗಿ ಮಾರ್ಪಟ್ಟು ಇಡೀ ದೇಶದ ಗಮನ ಸೆಳೆಯುತ್ತಿದೆ. ಶತಾಯ ಗತಾಯ ಅಧಿಕಾರ ಹಿಡಿದೆ ತೀರಬೇಕೆOಬ ಉದ್ದೇಶದಿOದ  ಬಿ ಜೆ ಪಿ ಪರಿವರ್ತನಾ ಯಾತ್ರೆ  ಆರಂಭಿಸಿದೆ. ಆದರೆ ದೌರ್ಭಾಗ್ಯವೆOದರೆ ಬಿ ಜೆ  ಪಿ ಯ ಓಳ ಜಗಳ ನಿಲ್ಲುವ ಸೂಚನೆ ಕಾಣದೆ ಅದು ಮಾರಕವಾಗುವ ಸೂಚನೆ ಕಾಣುತ್ತಿದೆ. ಪರಿವರ್ತನಾ ಯಾತ್ರೆ ಯ ಉದ್ಘಾಟನ ಸಭೆಗೆ ನಿರೀಕ್ಷಿತ ಮಟ್ಟಿನ ಕಾರ್ಯಕರ್ತರು ಹಾಜರಾಗದೆ ಶ್ರೀಮಾನ್ ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದಾರೆ.ಇದೆಲ್ಲಕ್ಕೊ ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ಕಾರಣವೆOದು ಬಿಜೆಪಿ ರಾಸ್ಟ್ರಾಧ್ಯಕ್ಸ್ಜರಿಗೆ ದೂರು ಕೂಡ ಹೋಗಿದೆ ಎOಬ  ಸುದ್ಧಿ ಇದೆ. ಅಲ್ಲಿಂದ ಮುOದೆ ಶ್ರೀಮಾನ್ ಎಸ್ ಈಶ್ವರಪ್ಪನವರು ತುಮಕೂರ್ ನಲ್ಲಿ ಏನೋ ಹೇಳಲು ಹೋಗಿ ಸವಿತಾ ಸಮಾಜದ ಕೆOಗಣ್ಣ ಗೆ  ಗುರಿಯಾಗಿದ್ದಾರೆ. ಇದೂ ಸಾಲದೆOಬOತೆ ಬಿ ಜೆ ಪಿ ಮಾಜಿ ಸಚಿವ ಸೊಗಡೂರು ಶಿವಣ್ಣ ಇದು ಬಿ ಜೆ ಪಿ ಯಾತ್ರೆ ಅಲ್ಲ ಇದು ಕೆ ಜೆ ಪಿ ಯಾತ್ರೆ ಎ Oದೂ , ಈ ಯಾತ್ರೆಗೆ ರೂಪಾಯಿ 500, 1000 ಕೊಟ್ಟು ಜನರನ್ನು ಕರೆ ತರುತ್ತಿದ್ದಾರೆ ಎOದು ಪತ್ರಿಕಾ ಗೋಸ್ಟಿ ಯಲ್ಲಿ ಹೇಳುವ ಮೂಲಕ ಬಿ ಜೆ ಪಿ ಮುಜುಗರ ಪಡುವOತೆ ಮಾಡಿದ್ದು ಅಲ್ಲದೆ  ಶ್ರೀ ಯಡಿಯೂರಪ್ಪ ನವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ ಜೆ  ಪಿ ಗೇ ಖಳನಾಯಕನಾದುದನ್ನು ಕೆದಕಿ   ನೆನಪಿಸುವOತಾಗಿದೆ. ಇಸ್ಟೂ ಸಾಲದಕ್ಕೆ ಶ್ರೀ ಯಡಿಯೂರಪ್ಪನವರ ಉತ್ತರ ಕರ್ನಾಟಕದ ವೋಟ್ ಬ್ಯಾOಕ್ ಆದ ಲಿಂಗಾಯಿತ ವೀರಶೈವ ಜನತೆ ಈಗ ತುOಬಾ ಸಂಕೀರ್ಣ ಸ್ಥಿತಿಯಲ್ಲಿದೆ. ಮೊನ್ನೆ  ಕೂಡಲ ಸಂಗಮ ಪಂಚಮ ಸಾಲಿ ಪೀಠದ ಬಸವ ಜಯ ಮ್ರತ್ಯುಂಜಯ ಸ್ವಾಮೀಜಿ   ಲಿಂಗಾಯಿತರು ಒಂದೇ ತಂದೆಗೆ ಹುಟ್ಟಿದ್ದು ,ಆದರೆ ವೀರಶೈವರು ಐವರು ತಂದೆಗೆ ಹುಟ್ಟಿದ್ದು ಎಂದು ಹಾದರ ಭಾಷೆಯ ತರ  ಹೇಳುವ ಮೂಲಕ ಸರ್ವ ಹಿOದು ಜನತೆಗೆ ಆಘಾತವಾಗಿದೆ. ಖಂಡಿತವಾಗಿಯೂ ಈ ಸ್ವಾಮಿಯನ್ನೂ ಇಡೀ ಹಿOದೂ ಸಮಾಜ ಖಂಡಿಸಿ ಬಹಿಸ್ಕರಿಸಬೇಕಿದೆ. ಆದರೆ ಹಿOದೂ ಸಂಘಟನೆಗಳಾದ ವಿಶ್ವ ಹಿOದು ಪರಿಶತ್, ಆರ್ ಎಸ್ ಎಸ್ ,ಶ್ರೀರಾಮ ಸೇನೆ ,ಭಜರಂಗ ದಳ ಹಾಗು ಬಿ ಜೆ ಪಿ  ಈ ಸ್ವಾಮೀಜಿಯ ಹೊಲಸು ಮಾತನ್ನು ಖಂಡಿಸಿ ಪ್ರತಿಭಟಿಸದಿರುವುದು ಸೋಜಿಗವೆನಿಸುತ್ತಿದೆ. ನಿಮಗೆ ವೀರಶೈವರು ಬೇಡದಿದ್ದರೆ ಬೇಡ,ಹಿOದೂ ಧರ್ಮವೂ ಬೇಡದಿದ್ದರೆ ಬೇಡ ,ಸರಕಾರ ಯಾ ಸOವಿಧಾನ ಮಾನ್ಯ ಮಾಡಲಿ  ಬಿಡಲಿ ನಿಮಗೆ ಬೇಕಾದ ಧರ್ಮದ ಹಾದಿಯಲ್ಲಿ ನಡೆಯಿರಿ, ಬೇಡವೆOದವರು ಯಾರು? ನೀವು ಸ್ವಂತಂತ್ರರು ಆದರೆ ಬೇರೆಯವರನ್ನು ಹಾದರಕ್ಕೆ ಹುಟ್ಟಿದವರು ( ಐವರಿಗೆ ಹುಟ್ಟಿದವರು) ಹೇಳುವ ಹಕ್ಕು ನಿಮಗಿಲ್ಲ.  ಅಂದು ಶ್ರೀ ಬಸವಣ್ಣನವರು ಎಲ್ಲರನ್ನು ಉದ್ದೇಶಿಸಿ  ಅಂದಿದ್ದರು  ” ಅವನಾರಯ್ಯ ಅವನಾರಯ್ಯ ಅವ ನಮ್ಮವನಯ್ಯ” ಸಕಲ ಮನುಜ ಕುಲದವರು ನಮ್ಮವರು ಎಂದು ಸಾರಿದ್ದರು.  ಆದರೆ ಇಂದು ಅದೇ ಲಿಂಗಾಯಿತರ ಸ್ವಾಮೀಜಿ ಇಸ್ಟೋOದು ವರ್ಷಗಳ ಕಾಲ ಜೊತೆಗಿದ್ದ  ವೀರಶೈವರನ್ನು  ಅತ್ಯಂತ ಹೊಲಸು ಮಾತುಗಳಿOದ ತೇಜೋವಧೆ ಮಾಡುವುದನ್ನು ನೋಡುವಾಗ ಆ ಸ್ವಾಮಿ ಪೀಠಕ್ಕೆ ಅವಮಾನವಾಗಿದೆ. ಇದು ಚುನಾವಣೆ ಇನ್ನೂ ಹತ್ತಿರವಾಗುತ್ತಿದOತೆ ಯಾವ ಮಟ್ಟಕ್ಕೆ ಹೋಗುತ್ತದೆ ಎOದು ಹೇಳಲಾಗದು.ಇದು ಬಿ ಜೆ ಪಿ ಗೆ ಮಾತ್ರವಲ್ಲ ಶ್ರೀ ಯಡಿಯೂರಪ್ಪನವರ ನಿದ್ದೆ ಕೆಡಿಸಿದೆ ಅಂದರೆ ತಪ್ಪಲ್ಲ. ಬಿ ಜೆ ಪಿ ಯು  ಐಟಿ ಯನ್ನು ತನ್ನ ದಾಳವಾಗಿ ಉಪಯೋಗಿಸಿಕೊOಡರೆ ಕರ್ನಾಟಕದ ಕಾಂಗ್ರೇಸ್ ಎಸ್ ಐ ಟಿ  ಯನ್ನು ತನ್ನ ದಾಳವನ್ನಾಗಿ ಉಪಯೋಗಿಸಲು ಚಿಂತನೇ ನಡೆಸಿದೆ. ಬೆಲೆಕೇರಿ ಮಂಗಳೂರು ಅಕ್ರಮ ಆದಿರು ರಫ್ತು ಪ್ರಕರಣದ  ಎಲ್ಲ  ಆರೋಪಿಗಳ ಆಟ ಬಟ್ಟಮ್ ಬಯಲಾದರೆ , ಬಿಜೆಪಿ ಅಧಿಕಾರದಲ್ಲಿದ್ದಾಗ ಇಂಧನ ಖರೀದಿಯ ಆಕ್ರಮಗಳು ಸಾಭೀತಾದರೆ ಬಿ ಜೆ  ಪಿ ಅಧಿಕಾರ ಹಿಡಿಯುವುದು ಕಗ್ಗಂಟಾಗಬಹುದು. ಇತ್ತ ಶ್ರೀ ಯಡಿಯೂರಪ್ಪನವರು ಶ್ರೀ ಸೀದ್ದರಾಮಯ್ಯನ ಅಧಿಕಾರವದಿಯಲ್ಲಿ ನಡೆದ ಭೂ ಹಗರಣಗಳನ್ನು ಸುದ್ದಿಗೋಸ್ಟಿಯಲ್ಲಿ ಬಯಲು ಪಡಿಸಿದ್ದರು. ಇದು ಬರೀ ಆಪಾದನೆಯೇ ಯಾ ನಿಜಾಂಶವಿದೇಯೇ ಎOಬುದು ಜನತೆಗೆ ತಿಳಿಯಬೇಕಿದೆ. ಸುಪ್ರೀಮ್ ಕೋರ್ಟ್ ಮದ್ಯೆ ಪ್ರವೇಶಿಸಿ ಈ ಎರಡೂ ಕಡೇಯವರು ಮಾಡಿರುವ ಆಪಾದನೆಗಳ ಬಗ್ಗೆ ನಿಷ್ಪಕ್ಷ ತನಿಖೆಗೆ ಆದೇಶಿಸಬೇಕು. ಸತ್ಯಾಂಶ ಹೊರ ಬಂದು ಬ್ರಸ್ಟ ರಾಜಕಾರಣಿಗಳು  ಚುನಾವಣೆಯ ಮೊದಲೇ ಜೈಲು ಸೇರಬೇಕು. ಸ್ವಚ್ಛ ಭಾರತದ ಅಭಿಯಾನದOತೆ  ಸ್ವಚ್ಛ ರಾಜಕಾರಣ ಅಭಿಯಾನವೂ ಆರOಭವಾಗಲಿ. ಸ್ವಚ್ಛ ಆಡಳಿತ ಜನತೆಗೆ ಸಿಗುವOತೆ ಆಗಲಿ.  ಒಂದು ಕಾಲದಲ್ಲಿ ಬಿ ಜೆ ಪಿ ಉಚ್ರಾಯ ಸ್ಥಿತಿಗೆ ಬರಲು ಶ್ರೀ ಯಡೆಯೂರಪ್ಪನವರೆ ಕಾರಣೀಕರ್ತರಾಗಿದ್ದರು.ಆದರೆ  ಇಂದು ಬಿ ಜೆ ಪಿ ನೆಲಕಚ್ಚಲು ಇವರೆ ಕಾರಣವಾಗಬಹುದು. ಒಂದೊಮ್ಮೆ ಬಿ ಜೆ ಪಿ ಶ್ರೀ ಯಡಿಯೂರಪ್ಪನವರ  ನೇತ್ರತ್ವದಲ್ಲಿ  ಬಹುಮತ ಗಳಿಸಲು ವಿಫಲವಾದಲ್ಲಿ ಶ್ರೀ ಯಡಿಯೂರಪ್ಪನವರಿಗೆ ಅವರ ರಾಜಕೀಯ ಭವಿಶ್ಯವೇ ಮುಗಿದOತೆ. ಕಳೆದ ಭಾರೀ ಮುಖ್ಯಮಂತ್ರಿ ಗಾದಿ ಸಿಕ್ಕಿದಾಗ   ಅದನ್ನು ಚೆನ್ನಾಗಿ ಐದು ವರ್ಷಗಳ ಕಾಲ ನಿಭಾಯಿಸಿದ್ದರೆ ಇಂದು ಪರಿಸ್ಥಿತಿಯೇ ಬೇರೆ ಇರುತಿತ್ತು. ಆದರೆ ಸಮಯ ಮೀರಿ ಹೋಗಿದೆ. ಇಂದು ಕರ್ನಾಟಕದಲ್ಲಿ ಬಿ ಜೆ ಪಿ ಯನ್ನು ಉಳಿಸಬೇಕಾದರೆ, ಬಹುಮತ ಗಳಿಸಬೇಕಿದ್ದಲ್ಲಿ ಸ್ವತಃ ಶ್ರೀ ಯಡಿಯೂರಪ್ಪನವರೆ ಖುದ್ದಾಗಿ  ಮುOದಿನ ಮುಖ್ಯಮಂತ್ರಿ ಶ್ರೀ ಅನಂತ್ ಕುಮಾರ್ ಹೆಗಡೆ ಯಾ ಶ್ರೀ ಸುರೇಶ್ ಕುಮಾರ್ ಎOದು ಘೋಷಿಸಿದರೆ  ನಿಜವಾಗಿಯೂ ಕರ್ನಾಟಕದಲ್ಲಿ ಒಂದು ಬದಲಾವಣೆ ಬರಬಹುದು
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
9594228684

Leave a Reply

Your email address will not be published. Required fields are marked *

Skip to toolbar