ಸಂಗೀತ ರಸ ಮಂಜರಿ ಮತ್ತು ನಾಟಕ ಪ್ರದರ್ಶನ.

ರಂಗಭೂಮಿಯಲ್ಲಿ ಕಲಾವಿದನಾಗಿ, ನ್ರತ್ಯ ಸಂಯೋಜಕನಾಗಿ ಸದಾ ತನ್ನ ಕಲಾ ಸೇವೆಯನ್ನು ಗೈಯುತ್ತಾ ಚಿರಪರಿಚಿತರಾಗಿರುವ ಸತೀಶ್ ದೇವಾಡಿಗ, ಮುಂಡ್ಕೂರು ಹಾಗೂ ಹರೀಶ್ ಕೋಟ್ಯಾನ್ ಪಡು ಇನ್ನಾಇವರ ಪ್ರಾಯೋಜಕತ್ವದಲ್ಲಿ ಕಮಲಕಲಾವೇದಿಕೆಯ ಲಾಂಛನದಡಿಯಲ್ಲಿ ಇದೇ ಬರುವ ಶನಿವಾರ ದಿನಾಂಕ 16/12/17 ರಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಲಯನ್ ಕಿಶೋರ್ ಡಿ.ಶೆಟ್ಟಿ ಮತ್ತು ನವೀನ್ ಶೆಟ್ಟಿ ಅಳಕೆ ಇವರ ಮಾರ್ಗದರ್ಶನ, ಶೋಭಾ ಶೆಟ್ಟಿ ಶಕ್ತಿನಗರ ಇವರ ಸಲಹೆಯೊಂದಿಗೆ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ ಗುರುದಯ ತಂಡದ ರಂಗ್ ದ ಕಲಾವಿದೆರ್ ಗುರುಪುರ ಇವರ ದಾಯೆ ಬದ್ಕೆರಾಪುಜಿ…!? ಎಂಬ ತುಳುಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಸಾಯಂಕಾಲ 4:00 ರಿಂದ 9:00 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೀತಾಂಜಲಿ ತಂಡದ ರಾಜೇಶ್ ಕೆ. ಬೆಳ್ತಂಗಡಿ ಮತ್ತು ಮಮತ ಕೆ. ಇವರಿಂದ ಸಂಗೀತ ರಸಮಂಜರಿ, ಸಭಾಕಾರ್ಯಕ್ರಮ ಹಾಗೂ ನಾಟಕವು ಸಾಂತಕ್ರೂಜ್ ನ ಬಿಲ್ಲವ ಭವನದ ಸಭಾಗ್ರಹದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಅತಿಥಿ ಗಣ್ಯರೊಂದಿಗೆ ತುಳುಚಲನ ಚಿತ್ರ ತಾರೆಯರಾದ ರೂಪಶ್ರೀ ವರ್ಕಾಡಿ, ಶ್ರದ್ಧಾ ಸಾಲಿಯಾನ್,ರಾಜೇಶ್ ಮೂಲ್ಯ, ಹಾಗೂ ಕಬಡ್ಡಿ ಆಟಗಾರನಾದ ರಿಶಾಂಕ್ ದೇವಾಡಿಗ ಉಪಸ್ಥಿತರಿರುವರು.
ಮುಂಬಯಿಯ ಹೆಸರಾಂತ ರಂಗನಟ /ನಿರ್ಧೇಶಕರಾದ ಶ್ರೀ ಮನೋಹರ್ ಶೆಟ್ಟಿ ನಂದಳಿಕೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ವನ್ನು ನವೀನ್ ಪಡು ಇನ್ನಾ,
ಪ್ರಭಾಕರ ಬೆಳುವಾಯಿ,ಸತೀಶ್ ಎರ್ಮಾಳ್,ವಿಶ್ವನಾಥ್ ಪೇತ್ರಿ, ಭಾಸ್ಕರ ಸಸಿಹಿತ್ಲು,ಶಿವಪ್ರಸಾದ್ ಪುತ್ತೂರು, ಮಾಧವ ಪಡೀಲ್,ಪ್ರಸನ್ನ ಕುಂಟಾಡಿ,ಸಂದೇಶ್ ಕುಂಟಾಡಿ, ಸುನೀಲ್ ಪಲಿಮಾರು, ಜಗದೀಶ್ ಕೇಮಾರ್,ಸುಧಾಕರ ನಾರಾವಿ, ನಿಶಾಂತ್ ಕಳತ್ತೂರು, ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್,ನಮನ ಫ್ರೆಂಡ್ಸ್ ಮುಂಬಯಿ.

ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ
ಕಲಾಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ ಬಯಸುವ :
ಸತೀಶ್ ದೇವಾಡಿಗ ಮುಂಡ್ಕೂರು. ಮತ್ತು ಹರೀಶ್ ಕೋಟ್ಯಾನ್ ಪಡು ಇನ್ನಾ

Leave a Reply

Your email address will not be published. Required fields are marked *

Skip to toolbar