ಹೋಯಿ ನಾವು ಕುಂದಾಪುರದರೇ…

ಇಲ್ ಕೆಣಿ,..
ಈ ಮೆಸೇಜ್ ಕಂಡ ಯಂತ ಇಷ್ಟ್ ಉದ್ದ ಅಂದೇಳಿ ಓದದೆ ಇರಬೇಡಿ,..
ಒಂದ್ ಗಳ್ಗಿ ಪೂರ್ಸೋತ್ ಮಾಡಕಂಡ್ ಇದನ್ ಓದಿ ಒಳ್ಳೇ ಕಾರ್ಯಕ್ರಮ, ಓಳ್ಳೆ ವಿಚಾರ , ಇದನ್ನಾ ಎಲ್ಲರಿಗೂ ಕಳಿಸುದ್ (ಶೆರ್ ಮಾಡುದ್) ಮರೆಬೇಡಿ ಅಕ್ಕಾ..

ನಮ್ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯರ್ ಮತ್ ಕೋಟೇಶ್ವರ ಕಿನಾರೆ ಬೀಚ್ ಉತ್ಸವ ಸಮಿತಿಯರ ಒಟ್ಟಿಗ ಸೇರಕಂಡ್ ಕೋಟೇಶ್ವರ ಕಿನಾರೆ ಬೀಚ್ ನಲ್ ಇದೆ ಡಿಸೆಂಬರ್ 29,30ನೇ ತಾರಿಕ್ “ಊರ್ ಮನಿ ಹಬ್ಬ” ಅಂದೇಳಿ ಕಾರ್ಯಕ್ರಮ ಇಟ್ಟಕಂಡಿರ್ ಕಾಣಿ..

ಈ ಕಾರ್ಯಕ್ರಮದಂಗೆ ಇಪ್ಪುದ್ ಒಂದಾ ಎರಡಾ..
ಕುಂದಾಪುರದ್ ಬಗ್ಗೆ ಜಾನಪದ ನೃತ್ಯ ಅಂಬ್ರ, ರಂಸಮಂಜರಿ, ಜಿಲ್ಲೆಯ ಹೆಸರಾಂತ ನೃತ್ಯ ತಂಡಗಳಿಂದ ಸಂಸ್ಕೃತಿ ಬಿಂಬಿಸುವ ನೃತ್ಯ ಅಂಬ್ರ, ಹೌದರಾಯನ ವಾಲ್ಗು ಅಂಬ್ರ, ನಾಟಕ, ವಸ್ತುಪ್ರದರ್ಶನ, ಮರಳು ಶಿಲ್ಪ ಸ್ಪರ್ಧೆ, ಕ್ರೀಡೋತ್ಸವ, ಛಾಯಾಚಿತ್ರ ಸ್ಪರ್ಧೆ, ಬಗೆ ಬಗೆ ಸ್ಟಾಲ್ ಗಳ ಅಂಬ್ರ, ಒಂದೇರೆಡಲ್ಲಾ ಅಂಬ್ರ ಕಾಣಿ,..

ಕುಂದಾಪುರ ಬದಿಯರ ಹೊಡ್ತಾ ಕಾಣಕರೆ ನೀವು ನಮ್ ಊರ್ ಮನಿ ಹಬ್ಬ ಕಾರ್ಯಕ್ರಮಕ್ಕೆ ಬರಕೆ… ಬತ್ರಿಯಲ್ಲ…

“ನಮ್ ಕುಂದಾಪುರ”

ನೀ ಕಾಣದ ಸ್ವರ್ಗ ನನ್ನೂರು..
ಅತ್ತ ಬೈಂದರೂ..
ಇತ್ತ ಕೋಟ
ಇನ್ನೊಂದೆಡೆ
ಹೆಬ್ರಿ..
ಮತ್ತೊಂದೆಡೆ ಸುಂದರ ಕಡಲ ತೀರ..

ಇದರ ಮದ್ಯದ ಊರು
“ಕುಂದಾಪುರ”
”ಕುಂದಾಪುರ” ಸ್ವರ್ಗದ ಮೊದಲನೇ ಮೆಟ್ಟಿಲು..

ಕುಂದಗನ್ನಡದ ಊರು.
ಕರಾವಳಿಯ ಸೆರಗು.
ದೇವಸ್ಥಾನಗಳ ಸೊಬಗು.
ಯಕ್ಷಗಾನದ ಸೊಗಡು.
ಕಂಬಳದ ಕೆಸರು..
ನಾಗಮಂಡಲದ ಮೆರಗು ..

ಕಣ್ಣು ಹಾಯಿಸಿದಷ್ಟು ಭತ್ತದ ಪೈರು.
ತೆಂಗು ಕಂಗುಗಳ ದರ್ಬಾರು.
ಹೊಟ್ಟೆ ಹಸಿದಾಗ ಸಿಗುವ ಮಾವು, ಹಲಸು..
ಕಣ್ಣಿಗೆ ಹಬ್ಬವಾಗಿಸುವ ಹೂಗಳ ರಂಗು.
ದೇವಲೋಕದ ಗಂಧ ಸೂಸುವ ಮಲ್ಲಿಗೆ,
ಸಂಪಿಗೆ,ಕೆದಗೆಯ ಕಂಪು…

ಇವುಗಳ ಒಮ್ಮೆ ನೋಡು ಸಾಕು.
ನೀ ಸ್ವರ್ಗದಲ್ಲಿರುವುದು ಏಕೆ ಬೇಕು..

ಇಲ್ಲಿಯ ನವಿಲ ನರ್ತನ.
ಕೋಗಿಲೆಯ ಕೂಗು.
ಗಿಣಿಯ ಉಲಿ.
ಗುಬ್ಬಿ, ಪಾರಿವಾಳ ಇತ್ಯಾದಿಗಳ ನೋಟ.
ಇಂಚಿಯ ಚಿಂವ್,ಚಿಂವ್ ಸದ್ದು,.
ಮಂಗಗಳ ಮಂಗನಾಟ.
ಎಲ್ಲಾ ಖಗ-ಮೃಗಗಳ ಇಲ್ಲುಂಟು.

ಇದನ್ನೇ ನೋಡಲು ನೂರು ವರ್ಷವಾದರೂ ಬೇಕು.

ಹೇಳು ಸ್ವರ್ಗದಲ್ಲಿ ಇನ್ನೇನು ಇರಬೇಕು..

‘ಕುಂದಾಪುರ’ ದೊಡ್ಡ ತಾಲ್ಲೂಕಲ್ಲ
ಆದರೂ ಒಂದಿಷ್ಟು ಊರು, ಗ್ರಾಮ, ಮನೆಗಳಿವೆ..

ಪ್ರತಿ ಮನೆಯೊಳಗೆ ಒಂದೊಂದು ನಂದಗೋಕುಲ.
ಇಡೀ ಊರೇ ಒಂದು ಕೂಡು ಕುಟುಂಬ.

ನನ್ನೊರ ಹಬ್ಬಗಳೆ ಸಡಗಡರದ ಸ್ವರ್ಗ..
ನನ್ನೂರ ಜನರ ಸಂಭ್ರಮದ ಮಾರ್ಗ.

“ಕುಂದಾಪುರದ ” ಬಗ್ಗೆ ಇನ್ನೇನು ಬೇಕು..

‘ಇಷ್ಟೇ ಸಾಕ ಮತ್ಯಂತ ಹೇಳ್ಕಾ…’

‘ಕುಂದಾಪುರ’ ಸ್ವರ್ಗಕ್ಕಿಂತ ಮಿಗಿಲು.
ಸ್ವರ್ಗ ‘ಕುಂದಾಪುರ’ದ ಮಗಳು.

ಬಾ ಒಮ್ಮೆ ನೋಡ ಬನ್ನಿ ‘ಕುಂದಾಪುರ’ ವ..
ಸ್ವರ್ಗವ ಹೆತ್ತ ಭೂಮಿಯ ನೋಡು..
ಸತ್ತು ಕಾಣುವ ಸ್ವರ್ಗದಾಸೆಯ ಬಿಡು.
ಇರುವಾಗಲೇ ‘ಕುಂದಾಪುರ’ವ ಕಾಣು.
ಅದರೆದುರು ಸ್ವರ್ಗದಲ್ಲೇನಿದೆ ಮಣ್ಣು.
ನೀ ‘ಕುಂದಾಪುರ’ವ ಕಾಣು.

ಸ್ವರ್ಗ ಎಂಬುದು ಕಲ್ಪನೆ.
ಬರಿ ಭ್ರಾಂತಿ ಮಾರ್ರೆ..

ನೀ ಒಮ್ಮೆ ‘ಕುಂದಾಪುರ’ ವ ಕಾಣು..
ಒಮ್ಮೆ ಊರಮನಿ ಹಬ್ಬ ಕಾಣು….

ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಕಿನಾರ ಬೀಚ್ ಉತ್ಸವ ಸಮಿತಿ ಕೋಟೇಶ್ವರ

Leave a Reply

Your email address will not be published. Required fields are marked *

Skip to toolbar