ಭಜನೆಯಿಂದಾಗುವ ಉಪಯೋಗಗಳು.

ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಏನಾದರೊಂದು ವಿಚಾರ ನಡೆಯುತ್ತಲೇ ಇರುತ್ತದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ತರಹ ಭಯ,ಚಿಂತೆ,ಅಸೂಯೆ,ಕ್ರೋಧ,ಮದ,ಮಾತ್ಸರ್ಯ,ಹೀಗೆ ವಿಧ ವಿಧವಾದ ಯೋಚನೆಗಳು.
ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ.
ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ.
ಇವುಗಳು ನಿಮಗೆ ಮಾತ್ರ ಆನಂದ ಉಂಟುಮಾಡದೆ ನಿಮ್ಮ ಸುತ್ತ ಕುಳಿತವರಿಗೂ ಹರಡುತ್ತವೆ.ಅವರಿಗೂ ಆನಂದದ ಅರಿವಾಗುತ್ತದೆ.ಪ್ರತಿಯೊಬ್ಬರಿಂದಲೂ ಈ ರೀತಿಯ ಶಕ್ತಿ ಅಲೆಗಳು ಹೊರಹೊಮ್ಮಿ ಆ ಭಜನೆಯ ಸ್ಥಳವೇ ಒಂದು ಶಕ್ತಿಯ ಕೇಂದ್ರ ಬಿಂದುವಾಗುತ್ತದೆ.
ಅದಕ್ಕೆ ಹಿಂದಿನವರು ಹೇಳುತ್ತಿದ್ದರು-ಎಲ್ಲೆಲ್ಲಿ ಸತ್ಸಂಗ,ಭಜನೆ ನಡೆಯುವುದೊ ಅಲ್ಲಿ ಆಂಜನೇಯ ಇರುವನೆಂದು.ಅಂದರೆ ನಿಮ್ಮ ಭಜನೆಯಿಂದ ದೇವರು ಪ್ರತ್ಯಕ್ಷವಾಗದಿದ್ದರೂ ನಿಮ್ಮಲ್ಲೇ ದೇವರ ಅವತಾರವಾಗುತ್ತದೆ.ನೀವೇ ಸಾಕ್ಷಾತ್ ದೇವರಾಗುತ್ತೀರಿ.
ಭಜನೆ ಮಾಡುವ ಸಮಯದಲ್ಲಿ ಭಜನೆಯ ಪ್ರತಿಯೊಂದು ಶಬ್ದವನ್ನೂ ಅನುಭವಿಸಿ ಆನಂದಿಸಿ.ಆದರೆ ಭಜನೆ ಚೆನ್ನಾಗಿತ್ತು,ಅದು ಚೆನ್ನಾಗಿಲ್ಲ,ಅವರು ಸರಿಯಾಗಿ ಹಾಡಲಿಲ್ಲ,ಎಂದೆಲ್ಲಾ ಯೋಚಿಸಲು ಹೋಗಬಾರದು.ಯಾವಾಗ ಬೇಕು-ಬೇಡಗಳ ಬಗ್ಗೆ ಚಿಂತಿಸುತ್ತೀರೋ ಕೂಡಲೆ ನಿಮ್ಮ ಶಕ್ತಿ ಇಳಿದುಹೋಗುತ್ತದೆ. ಭಜನೆ ಹೇಗಿದೆಯೋ ಹಾಗೆ ಸ್ವೀಕರಿಸಿ ಅದರೊಂದಿಗೆ ಆನಂದದಿಂದಿರಿ.ರಾಗ ತಾಳ ಹೇಗೇ ಇರಲಿ ದೇವರನಾಮ ಬಾಯಿಗೆ ಬರಲಿ ಎಂದು ಕೇಳಿದ್ದೀರಲ್ಲ ಹಾಗೆ ಭಜನೆಯನ್ನು ಕಣ್ಣು ಮುಚ್ಚಿ ಮಾಡಿರಿ.
🌷ಓಮ್ ಶ್ರೀ ಏಕನಾಥೇಶ್ವರೀ ನಮಃ 🌷

Leave a Reply

Your email address will not be published. Required fields are marked *

Skip to toolbar