ದೇವಾಡಿಗರೇ ಜಾತೀಯತೆಯ ಬಗ್ಗೆ ಆತ್ಮ ವಿಮರ್ಶೇ ಮಾಡಿಕೊಳ್ಳಿರಿ.

ಜನವರಿ 1 ರಂದು ಪುಣೆಯಲ್ಲಿ ದಲಿತರ ಭೀಮಾ ಕೋರೆಗಾವ್ ಪೇಶ್ವೇಗಳ ವಿರುದ್ದ ಬ್ರಿಟಿಷರ ಗೆಲುವಿನ 200 ವರ್ಷದ ವಿಜಯೋತ್ಸವದ ಆಚಾರಣೆ ಎನ್ನುವOಥದ್ದು ಅಂದಿನ ದಲಿತರ ಒಂದು ಜಾತೀಯತೆ ಯಾವ ಮಟ್ಟದಲ್ಲಿತ್ತು ಎOಬುದನ್ನು ತೋರಿಸುತ್ತದೆ. ಬ್ರಿಟಿಶರ ಸೈನ್ಯದಲ್ಲಿ ಸೈನಿಕರಾಗಿದ್ದ ದಲಿತರಿಗೆ ಪೇಶ್ವೇ ಬ್ರಾಹ್ಮಣರ ವಿರುದ್ದ ಅಂದು ಅವರಿಗೆ ಮೇಲ್ವರ್ಗದ ಮೇಲಿನ ವಿರುದ್ದದ ವಿಜಯವೇ ಆಗಿತ್ತು.ನಾನು ನನ್ನ ಬಾಲ್ಯದಲ್ಲಿಯೆ ಅಸ್ಪೃಶ್ಯತೆ ಎಸ್ಟು ಗಾಡವಾಗಿತ್ತು ಎOದು ಹತ್ತಿರದಲ್ಲಿಯೇ ಕಂಡವ. ಅದು 200 ವರ್ಷಗಳ ಹಿOದೆ ಊಹಿಸಲು ಆಗದ ಪರಿಸ್ಥಿತಿ ಇರಬಹುದು.ಆಗ ಈ ಮೇಲ್ವರ್ಗದ ವಿರುದ್ದ ಸೇಡು ತೀರಿಸಿಕೊಳ್ಳಲು ಬ್ರಿಟಿಷರ ಸೈನ್ಯ ಸೇರಿರಬಹುದು. ಬ್ರಿಟಿಷರು ಈ ಜಾತೀಯತೆಯನ್ನು ದಾಳವಾಗಿಸಿಕೊOಡು ಇಡೀ ದೇಶವನ್ನೇ ವಶಪಡಿಸಿಕೊOಡದ್ದು ಇತಿಹಾಸ. ಇನ್ನು ಶತ್ರುವಿನ ಶತ್ರು ನಮಗೆ ಮಿತ್ರ ಎನ್ನುವ ಮಾತಿನಂತೆ ದಲಿತರು ದೇಶದ ವಿರುದ್ದ ಆದರೂ ಪರವಾಗಿಲ್ಲ ಒಮ್ಮೆ ಹೀನಾಯವಾಗಿ ಕಾಣುತ್ತಿರುವ ಈ ಮೇಲ್ವರ್ಗದವರನ್ನು ಸದೆಬಡಿಯಲೋಸುಗ ಬ್ರಿಟಿಷರನ್ನು ಆಯ್ಕೆ ಮಾಡಿಕೊOಡದ್ದು ಅಂದಿನ ದಲಿತರ ಜಾತೀಯತೆಯ ಕಾವನ್ನು ತೋರಿಸುತ್ತದೆ. ಇಂದು ಅದೇ ಅವರ ಜಾತೀಯತೆ 200 ಪಟ್ಟು ಹೆಚ್ಚಾಗಿದೆ ಅಂದರೇ ತಪ್ಪಲ್ಲ. ರಾಜಕೀಯ ಔಟ್ ಬ್ಯಾOಕ್ ಆಗಿ ಬೆಳೆಯಲು ಈ ಜಾತೀಯತೆಯ ಓಗ್ಗಟ್ಟೇ ಕಾರಣ. ಎರಡು ದಿನಗಳ ಒಳಗೆ ಅವರ ಜಾತೀಯತೆಯ ಕಾವು ಇಡೀ ಮಹರಾಸ್ಟ್ರ ಹರಡಿದೆ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು ಅಕ್ಶಮ್ಯ ಅಪರಾಧ. ದಲಿತರಿಗೆ ಅನ್ಯಾಯವಾದಾಗ ಇಡೀ ದೇಶದಲ್ಲಿನ ಅವರ ಆ ಒಗ್ಗಟ್ಟಿನ ಸೊಬಗು ನಿಜಕ್ಕೂ ಶ್ಲಾಘನೀಯ. ಆದರೆ ನಮ್ಮ ದೇವಾಡಿಗರಲ್ಲಿ ?
ನಿಜಕ್ಕೂ ಇದನ್ನು ದೇವಾಡಿಗ ನಾಯಕರುಗಳಿOದ ಹಿಡಿದು ಸಾಮಾನ್ಯ ದೇವಾಡಿಗರು ಆತ್ಮ ವಿಮರ್ಶೇ ಮಾಡಿಕೊಳ್ಳಬೇಕಿದೆ ” ನಾವೇಕೆ ಹೀಗೆ ” ? ಇದ್ದ ಸಂಘಟನೆಗಳಲ್ಲಿ ಹ಼ಲವಾರು ಒಡಕು, ಸ್ವಾರ್ಥ, ಮತ್ಸರ, ಎಲ್ಲೆಲ್ಲು ನಾನೇ , ಎಲ್ಲೇಲು ನಾನೇ ಎOಬ ಭಾವ ಬೇರೇ. ಇದಕ್ಕೆ ಉತ್ತರ ನನ್ನಲ್ಲಿ ಇಲ್ಲ,
ಭಂದುಗಳೇ ನಿಮ್ಮಲ್ಲಿದೆಯೇ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Leave a Reply

Your email address will not be published. Required fields are marked *

Skip to toolbar