Month: January 2018

ವಿಶ್ವಾಸ, ಅದಕ್ಕೆ ದ್ರೋಹ ಮಾಡದಿರಿ.

January 9, 2018

ತಂದೆಯಾದವನು ರಾತ್ರಿ, ಹಗಲು ದುಡಿದು ಒಂದೊಂದು ಪೈಸೆ ಕೂಡಿ ಇಟ್ಟು ಮಗಳಿಗಾಗಿ ಒಂದೊಂದೇ ಬಂಗಾರದ ಆಭರಣ ಮಾಡಿಸಿ ಅದನ್ನು ಕಪಾಟಿನಲ್ಲಿ ಇಟ್ಟು ಕಣ್ಣಿನಲ್ಲಿ ಒಂದು ತಣ್ಣನೆಯ ತೃಪ್ತಿ ಪಡುತ್ತಾನಲ್ಲ, ಅದಕ್ಕೆ ಬೆಲೆ ಕಟ್ಟಲು ಆಗುತ್ತಾ, ಮಗಳು ಡಾಕ್ಟರೋ, ಇಂಜಿನಿಯರೋ ಆಗಲಿ ಎಂದು ಹೊರಗೆ ಹೆಚ್ಚುವರಿ ದುಡಿದು ದಣಿದು ಬಂದು ಮಗಳು ತನ್ನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದಾಳಲ್ಲ ಎಂದು ವಿಶ್ವಾಸದಿಂದ ಇಣುಕಿ ಸಂತೃಪ್ತಿ ಪಡುತ್ತಾನಲ್ಲ, ಅದನ್ನು ತುಲನೆ ಮಾಡಲು ಅಗುತ್ತಾ, ಮಗಳು ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ನಲ್ಲಿ ಭಾಗವಹಿಸಬೇಕು, […]

Read More

ಉಚಿತ ಎ.ಸಿ. ಹಾಗೂ ರೆಫ್ರಿಜರೆಟರ್ ನಿವ೯ಹಣೆ ಹಾಗೂ ದುರಸ್ತಿ ತರಬೇತಿ.

January 9, 2018

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ಊಟ-ವಸತಿಯೋಂದಿಗೆ ಉಚಿತ ಎ.ಸಿ. ಹಾಗೂ ರೆಫ್ರಿಜರೆಟರ್ ನಿವ೯ಹಣೆ ಹಾಗೂ ದುರಸ್ತಿ ತರಬೇತಿಯು ಫೆಬ್ರವರಿ ೧೨ ರಿಂದ ಪ್ರಾರಂಭವಾಗಲಿದೆ ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು. https://goo.gl/5gfDc5 ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ 0820-2563455.

Read More

ಅಹಂಕಾರ ಎಂಬುದು ಅಪಾಯಕಾರಿ.

January 9, 2018

ಈ ಪ್ರಪಂಚದಲ್ಲಿ ಜ್ಞಾನ ಎಂಬುದು ಬಹು ಮುಖ್ಯ ಸಂಪತ್ತು. ವಿಶೇಷವಾದ ತಿಳಿವಳಿಕೆಯುಳ್ಳವರನ್ನು ಜ್ಞಾನಿಗಳೆನ್ನುತ್ತಾರೆ. ಅಂಥ ಜ್ಞಾನವಿಲ್ಲದವರನ್ನು ಅಜ್ಞಾನಿಗಳೆಂದೂ, ಕಡಿಮೆ ಜ್ಞಾನವುಳ್ಳವರನ್ನು ಅಲ್ಪ ಜ್ಞಾನಿಗಳೆಂದೂ ಕರೆಯುತ್ತಾರೆ. ಇನ್ನೊಂದು ವರ್ಗದವರಿರುತ್ತಾರೆ. ಅವರು ಅಲ್ಪ ಜ್ಞಾನಿಗಳಾಗಿದ್ದರೂ ತಾವು ಮಹಾ ಜ್ಞಾನಿಗಳು ಎಂಬಂತೆ ಕೆಟ್ಟ ಅಹಂಕಾರದಿಂದ ವರ್ತಿಸುತ್ತಾರೆ. ಕೇವಲ ತಮ್ಮ ಮನೆತನ, ಕುಲ, ಹುದ್ದೆಯ ಬಲದಿಂದ ವ್ಯವಹರಿಸುತ್ತಾರೆ. ಅಂಥವರ ಕಣ್ಣು ತೆರೆಯಿಸಿದ ಒಂದು ಹಳ್ಳಿಯ ಮುದುಕಿಯ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ: ಮಾಳವ ದೇಶದ ರಾಜನಾದ ಭೋಜನು ಒಮ್ಮೆ ತನ್ನ ಆಸ್ಥಾನದ ಮಹಾ ಪಂಡಿತನಾದ […]

Read More

“ದೇವಾಡಿಗ ಯುವಸಂಘಟನೆ ಹಿರಿಯಡಕ” ವತಿಯಿಂದ “ದೇವಾಡಿಗ ಯುವ ಸಂಘಟನೋತ್ಸವ”

January 9, 2018

ದಿನಾಂಕ 13 /01//2018 ಶನಿವಾರದಂದು ಸಂಜೆ 6.00 ರಿಂದ ಹಿರಿಯಡಕದ ಗಾಂಧಿ ಮೈದಾನದಲ್ಲಿ “ದೇವಾಡಿಗ ಯುವಸಂಘಟನೆ ಹಿರಿಯಡಕ” ವತಿಯಿಂದ “ದೇವಾಡಿಗ ಯುವ ಸಂಘಟನೋತ್ಸವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ವಿನಂತಿ

Read More

ದೇವಾಡಿಗರೇ ಜಾತೀಯತೆಯ ಬಗ್ಗೆ ಆತ್ಮ ವಿಮರ್ಶೇ ಮಾಡಿಕೊಳ್ಳಿರಿ.

January 5, 2018

ಜನವರಿ 1 ರಂದು ಪುಣೆಯಲ್ಲಿ ದಲಿತರ ಭೀಮಾ ಕೋರೆಗಾವ್ ಪೇಶ್ವೇಗಳ ವಿರುದ್ದ ಬ್ರಿಟಿಷರ ಗೆಲುವಿನ 200 ವರ್ಷದ ವಿಜಯೋತ್ಸವದ ಆಚಾರಣೆ ಎನ್ನುವOಥದ್ದು ಅಂದಿನ ದಲಿತರ ಒಂದು ಜಾತೀಯತೆ ಯಾವ ಮಟ್ಟದಲ್ಲಿತ್ತು ಎOಬುದನ್ನು ತೋರಿಸುತ್ತದೆ. ಬ್ರಿಟಿಶರ ಸೈನ್ಯದಲ್ಲಿ ಸೈನಿಕರಾಗಿದ್ದ ದಲಿತರಿಗೆ ಪೇಶ್ವೇ ಬ್ರಾಹ್ಮಣರ ವಿರುದ್ದ ಅಂದು ಅವರಿಗೆ ಮೇಲ್ವರ್ಗದ ಮೇಲಿನ ವಿರುದ್ದದ ವಿಜಯವೇ ಆಗಿತ್ತು.ನಾನು ನನ್ನ ಬಾಲ್ಯದಲ್ಲಿಯೆ ಅಸ್ಪೃಶ್ಯತೆ ಎಸ್ಟು ಗಾಡವಾಗಿತ್ತು ಎOದು ಹತ್ತಿರದಲ್ಲಿಯೇ ಕಂಡವ. ಅದು 200 ವರ್ಷಗಳ ಹಿOದೆ ಊಹಿಸಲು ಆಗದ ಪರಿಸ್ಥಿತಿ ಇರಬಹುದು.ಆಗ ಈ […]

Read More
Skip to toolbar