ಬಾರ್ಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಸಂಭ್ರಮ, ನೆರೆದ ಸಾವಿರಾರು ಭಕ್ತರು.

ಕುಂದಾಪುರ: ಜಿಲ್ಲೆಯ ಬಾರ್ಕೂರಿನ ಕಚ್ಚೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪದ ವಿಶಾಲ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ಸುತ್ತು ಪೌಳಿ, ರಕ್ತೇಶ್ವರೀ, ಗುಳಿಗ, ಬ್ರಹ್ಮ, ನಾಗದೇವರ ಗುಡಿ ಮತ್ತು ಸುತ್ತು ಪೌಳಿ ಸಮರ್ಪಣೆಯೊಂದಿಗೆ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಬೆಳಿಗ್ಗೆನಿಂದ ಶ್ರೀದೇವಳದಲ್ಲಿ ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಿ ವಿಗ್ರಹ ಪ್ರತಿಷ್ಠೆ ಮಹೋತ್ಸವವು ಭವ್ಯ ಶಿಲಾಮಯ ಮಂದಿರದಲ್ಲಿ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿಯವರ ಆಚಾರ್ಯ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದು ಪ್ರಾತಃಕಾಲ 6.30ರಿಂದ ಪುಣ್ಯಾಹವಾಚನ ಸಂಕಲ್ಪ ರತ್ನನ್ಯಾಸಪೂರ್ವಕ ನಡೆದಿದ್ದು ಬಳಿಕ 8.00 ಗಂಟೆಗೆ ಶುಭಲಗ್ನ ಸುಮುಹೂರ್ತದಲ್ಲಿ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನಾ ಕಾರ್ಯವು ನೆರವೇರಿತು. ಬಳಿಕ ಅಷ್ಟಬಂಧ ಮಂತ್ರನ್ಯಾಸ ನಿದ್ರಾ ಕಲಶಾಭಿಷೇಕ, ಜೀವಕಲಶಾಭಿಷೇಕ, ಅಲಂಕಾರ ಮಹಾಪೂಜೆ, ಮಹಾಮಂಗಳಾರತಿ ಈ ಮಧ್ಯೆ ಶಿಖರ ಪ್ರತಿಷ್ಠೆ ನೆರವೇರಿತು. ಪ್ರತಿಷ್ಠಾಫಲ, ಕೀರ್ತನೆ ಪ್ರಸಾದ ವಿತರಣೆ, ಆ ಮೇಲೆ ನಿತ್ಯ ಪೂಜೆ ವೇದಪಾರಾಯಣ ಪೂಜಾ ಹೋಮಾದಿಗಳು ಸದ್ಯ ನಡೆಯುತ್ತಿದೆ. ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ ಸಾಕ್ಸೋಫೋನ್ ವಾದನ ಹಾಗೂ ವಿವಿಧ ಭಜನಾತಂಡಗಳಿಂದ ಭಕ್ತಿ ಸಂಕೀರ್ತನೆ ಮೊದಲಾದವು ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರಿನ ಪರವಾಗಿ ಅಧ್ಯಕ್ಷರು ಮತ್ತು ಆಡಳಿತ ವಿಶ್ವಸ್ಥರಾದ ಬಿ. ಅಣ್ಣಯ್ಯ ಶೇರಿಗಾರ್, ಪುಣೆ, ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸ್ಥ ನರಸಿಂಹ ಬಿ. ದೇವಾಡಿಗ ಉಡುಪಿ, ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‌ದಾಸ್ ಮುಂಬೈ, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇದ್ದರು. ದೇವಾಡಿಗ ಸಮಾಜದ ಮುಖಂಡರಾದ ಶರ್ಮಿಳಾ ಹರೀಶ್ ಶೇರಿಗಾರ್, ಗಣೇಶ್ ಶೇರಿಗಾರ್ ಮುಂಬೈ, ನಾರಾಯಣ ದೇವಾಡಿಗ ಕುಂದಾಪುರ, ಯುವರಾಜ್ ದೇವಾಡಿಗ ದುಬೈ, ಗೌರವ ಸಲಹೆಗಾರರು, ದೇವಸ್ಥಾನ ನಿರ್ಮಾಣ ಸಮಿತಿ ಸದಸ್ಯರು, ದೇವಾಡಿಗ ಸಮಾಜದ ಸರ್ವ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಮಸ್ತ ದೇವಾಡಿಗ ಬಂಧುಗಳು ಇದ್ದರು.

Leave a Reply

Your email address will not be published. Required fields are marked *

Skip to toolbar