ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ರಮೇಶ್ ದೇವಾಡಿಗರಿಗೆ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು.

ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ಇವರು ಮಾರ್ಚ್ ತಿಂಗಳ ಸೇವಾ ಯೋಜನೆಯಲ್ಲಿ ಕಿವಿ ಕೇಳದ ಬಾಯಿ ಬಾರದ ಕಾರ್ಕಳ ತಾಲೂಕಿನ ಬಜಗೊಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ರ್ತಾನ ದಲ್ಲಿನ ರಮೇಶ್ ದೇವಾಡಿಗರಿಗೆ ( ಅಫ್ಹಘಾತಕ್ಕಿಡಾಗಿ ಕಾಲಿಗೆ ಗoಭೀರವಾಗಿ ಜಖಂ ಗೊoಡಿರುವ) ಇಂದು ಅವರ ಮನೆಗೆ ತೆರಳಿ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು. ನವೀ ಮುoಬೈ ಬಿ ಜೆ ಪಿ ಜಿಲ್ಲಾ ಕನ್ನಡ ಘಟಕದ ಉಪಾಧ್ಯಕ್ಷ ಹಾಗೂ ಫೌಂಡೇಶನ್ ನ ಸದಸ್ಯರಾದ ಶ್ರೀ ರಮೇಶ್ ಸಾಲ್ಯಾನ್ ಅಲ್ಲದೆ ಫೌಂಡೇಶನ್ ನ ಇತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಕಳ ದೇವಾಡಿಗ ಸಂಘದ ಸದಸ್ಯರಿಗೆ ವಯಕ್ತಿಕವಾಗಿ ಇಂದು ಬೆಳಿಗ್ಗೆ ಈ ವಿಷಯ ತಿಳಿಸಲಾಗಿತ್ತು. ಅವರ ಅನೂಪಸ್ತಿತಿ ಎದ್ದು ಕಾಣುತಿತ್ತು. ಕಳೆದ ಕೆಲವು ವರ್ಷಗಳಿಂದ ಈ ಫೌಂಡೇಶನ್ ತಿಂಗಳಿಗೆ ನಾಲ್ಕರಿoದ ಐದು ವೈದ್ಯಕೀಯ ಕೇಸುಗಳಿಗೆ ನಿರಂತರ ವೈದ್ಯಕೀಯ ನೆರವನ್ನು ಅವರ ಮನೆಗೆ ತೆರಳಿ ಕೊಡುತ್ತಾ ಬಂದಿದೆ.

Leave a Reply

Your email address will not be published. Required fields are marked *

Skip to toolbar