ಮಹಾಬಲ ದೇವಾಡಿಗರು ಜಾಲಾಡಿಯ ಹೆಮ್ಮೆಯ ಯಕ್ಷಗಾನ ಗುರುಗಳು, ಕಮಲಶಿಲೆ ಹಾಸ್ಯಗಾರರು

ದೇಹಕ್ಕೆ ವಯಸ್ಸಾದರು,ರಂಗದಲ್ಲಿ ಯುವಕರಂತೆ ಕುಣಿಯುವ ಮಹಾಬಲ ದೇವಾಡಿಗರು ನಡುತಿಟ್ಟಿನ ಹಿರಿಯ ಹಾಸ್ಯಗಾರರ ಪೈಕಿ ಈಗ ಅಪಾರ ಅನುಭವ ಹೊಂದಿದ ಎಲ್ಲಾ ಪುರಾಣ ಪ್ರಸಂಗದ ನಡೆಯನ್ನು ಪಡೆದ ಹಿಂದಿನ ಹಿರಿಯ ಹಾಸ್ಯಗಾರರನ್ನು ನೆನಪಿಸಿಕೊಡುವ ಹಾಸ್ಯಗಸರರು ಇವರು.

ಹುಟ್ಟಿದ್ದು ಯಕ್ಷಗಾನದ ತವರೂರಾದ ಕಮಲಶಿಲೆಯಲ್ಲಿ ,ದಿನಾಂಕ -10-10-1955 ರಲ್ಲಿ,,ಆಜ್ರಿ ಮಾನಂಜೆ ಕಮಲಶಿಲೆ ಶಾಲೆಯಲ್ಲಿ -3-ನೇ ತರಗತಿಯ ವರೆಗೆ ವಿದ್ಯಾಬ್ಯಾಸ ಮುಗಿಸಿ ತನ್ನ -15-ನೇ ವರ್ಷ ಪ್ರಾಯದ ಲ್ಲಿ ,ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿದರು,ಆಮೇಲೆ ಉಡುಪಿ ಯಕ್ಷಗಾನ ಕಲಾ ಕೇಂದ್ರದಲ್ಲಿ ಸಮರ್ಥ ಗುರು ತ್ರಯರು ದೊರೆತರು.ಅವರೇ ವೀರಭದ್ರ ನಾಯ್ಕರು ,ಹಿರಿಯಡ್ಕ ಗೋಪಲರಾಯರು,ನೀಲಾವರ ರಾಮಕೃಷ್ಣಯ್ಯ,,ಅವರ ನಿರ್ದೇಶನದಲ್ಲಿ ರಂಗದ ಎಲ್ಲಾ ಅನಭವ ಪಡೆದು ,ಅಲ್ಲಿ ಶಿವರಾಮ ಕಾರಂತರ ತರಭೇತಿಯಲ್ಲಿ ಚಕ್ರವ್ಯೂಹದ ಅಬಿಮನ್ಯು,ಲವಕುಶ ,ಇಂತಹ ಪಾತ್ರವನ್ನು ಮಾಡಿ ಡಿಲ್ಲಿಯಲ್ಲಿ ಅಬಿಮನ್ಯು ಪಾತ್ರಕ್ಕೆ ಸಂಗೀತ ಅಕಾಡಮಿಯಲ್ಲಿ 1974-ರಲ್ಲಿ-ಕಂಚಿನ ಪಧಕ ಪಡೆದರು.ಹಾಗೆ ಮಾರ್ಣಕಟ್ಟೆಮೇಳದಲ್ಲಿ ಹಾಸ್ಯಗಾರರಾಗಿ ,M.M.ಹೆಗ್ಡೆಯವರ ಯಜಮಾನಿಕೆಯಲ್ಲಿ ಹಿರಿಯ ಬಾಗವತರಾದ ನರಸಿಂಹದಾಸ್ ,ಶ್ರೀನಿವಾಸದಾಸರು ಮರಿಯಪ್ಪ ಆಚಾರ್ಯರು, ವಂಡಾರು ಬಸವ,ಹಳ್ಳಾಡಿ ಕೃ್ಷ್ಣಪ್ಪ ,ಮಾರ್ಗೋಳಿ ಗೋವಿಂದ ಸೇರ್ವೆಗಾರ್,ಇವರ ಪ್ರೇರಣೆಯಿಂದ ,ಹಾಸ್ಯ ಕಲಾವಿದನಾದೆ ಎಂದು ಸಂತೋಷ ಪಡುತ್ತಾರೆ.ಈಗ ಮಂದರ್ತಿ ಮೇಳದಲ್ಲಿ 29-ವರ್ಷ ತಿರುಗಾಟ,ಮಾಡುತ್ತಾ ರಂಗದಲ್ಲಿ ತನ್ನ ಉತ್ಸಾಹ ತೋರಿಸುತ್ತಾ ಇದ್ದಾರೆ.ಹೀಗೆ ಹಾಸ್ಯಕಲಾವಿದನಾಗಿ -40-ವರ್ಷ ,ಕೋಡಂಗಿ,ಬಾಲಗೋಪಾಲ,ಪೀಠಿಕೆ ಸ್ತ್ರೀವೇಷ,ಮತ್ತು ಒತ್ತು ಮೂರನೆ ವೇಷ 06ವರ್ಷ. ಹಾಸ್ಯಗಾರರಾಗಿ -40-ವರ್ಷ -,ಒಟ್ಟು -46-ವರ್ಷಮೇಳದ ತಿರುಗಾಟದ ಅನುಭವಿ ಹಾಸ್ಯಗಾರ.

ಇವರು ಕಟ್ ಬೇಲ್ತೂರು ಗ್ರಾಮದ ಜಾಲಾಡಿಯಲ್ಲಿ ತನ್ನ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು,ಹಾಗು ಹೆಂಡತಿ ಕಮಲಳೊಂದಿಗೆ ನೆಮ್ಮದಿಯ ಜೀವನ ಕಲಾಮಾತೆಯ ಅನುಗ್ರಹದಿಂದ ಕಲಾಭಿಮಾನಿಗಳ ಸಹಕಾರದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಮತ್ತೆ ಇವರು ಹಲವಾರು ಸಂಘ ಸಂಸ್ಥೆಗಳಿಗೆ ಗುರುಗಳಾಗಿ ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ.ಇಂತಾ ಹಿರಿಯ ಹಾಸ್ಯಗಾರರಿಗೆ ಎಲ್ಲಾಕಲಾಬಿಮಾನಿಗಳು ಸಂಘ ಸಂಸ್ಥೆಗಳ ಪರವಾಗಿ ಗುರುತಿಸುವರೆ ಅಪೇಕ್ಷಿಸುತ್ತೇವೇ.

*ಕಳೆದವರ್ಷ ಗೋರ್ಪಾಡಿ ವಿಠಲ ಪಾಟಿಲರ ಪ್ರಶಸ್ತಿ* ದೊರೆತಿದೆ,
*ಮಾರ್ಣಕಟ್ಟೆ ವಿಪ್ರಯಕ್ಷಗಾನ ಬಳಗದವರಿಂದ ಸನ್ಮಾನಿಸಿ -50 ಸಾವಿರ ರೂಪಾಯಿಯನ್ನು ನೀಡಿದ್ದಾರೆ.ಹೆಚ್ಚಿನಕಡೆ ಶಿಷ್ಯವೃಂದದವರು,ಸನ್ಮಾನಿಸಿದ್ದಾರೆ.ಇವರಿಗೆ ತೃಪ್ತಿ ಕೊಟ್ಡ ವೇಷ,ನಳಧಮಯಂತಿಯ ಭಾಹುಕನ ಪಾತ್ರ.

*ಇವರ ಪೋನ್ ನಂಬರ್,9902296077.

Leave a Reply

Your email address will not be published. Required fields are marked *

Skip to toolbar