ಕರ್ನಾಟಕದಲ್ಲಿ ಚುನಾವಣಾ ಮಹಾ ಸಮರಕ್ಕೆ ವೇದಿಕೆ ಸಿದ್ದ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗು ಜೆ ಡಿ ಎಸ್ ನ ಚುನಾವಣಾ ಸಮರಕ್ಕೆ ಬೇಕಾಗುವ ಎಲ್ಲಾ ತಾಲೀಮು ಪ್ರಾರoಭಗೊಂಡಿದೆ. ಕಾಂಗ್ರೆಸ್ ನ್ನಲ್ಲಿ ಶ್ರೀ ಸಿದ್ಧರಾಮಯ್ಯನವರಿದ್ದ ಕಾರಣ , ಕಾಂಗ್ರೆಸನ್ನು ಜರೆಯುವುತಿದ್ದ ಜೆಡಿಎಸ್ , ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ನಿಶ್ಚಲ ಬಹುಮತ ಪಡೆಯುವುದು ತಿಳಿದ ತಕ್ಷಣ ಕಾಂಗ್ರೆಸ್ ನೊoದಿಗೆ ಚುನಾವಣ ಹೋಂದಾಣಿಕೆಗೆ ತಾನು ತಯಾರಿರುವುದಾಗಿ ತಿಳಿಸಿದೆ. ಒಂದು ಲೆಕ್ಕದಲ್ಲಿ ಬಿಜೆಪಿ ಶ್ರೀ ಯಡೆಯೂರಪ್ಪನವರನ್ನು ಮುಖ್ಯಮಂತ್ರಿ ಅಂತ ಘೋಷಿಸಿದಾಗಲೇ ಕಾಂಗ್ರೆಸ್ ಅರ್ಧ ಚುನಾವಣೆ ಗೆದ್ದಾಗಿತ್ತು ಅಂದರೆ ಸುಳ್ಳಲ್ಲ. ಕಾರಣ ಇಸ್ಟೇ ಕಳೆದ ಸಲ ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪನವರು ಭ್ರಸ್ಟಾಚಾರದ ಕಾರಣ ಅಧಿಕಾರ ವಂಚಿತರಾದದ್ದು ಅಲ್ಲದೆ ನಂತರ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಇದೇ ಶ್ರೀ ಯಡಿಯೂರಪ್ಪನವರು ಹೇಗೆ ನಡೆಸಿಕೊoಡರೂ ಏನ್ನು ವುದನ್ನು ಕರ್ನಾಟಕದ ಜನತೆ ಬಿಡಿ ರಾಜ್ಯದ ಬಿಜೆಪಿಗರು ಮರೆತಿರಲಿಕ್ಕಿಲ್ಲ. ಶತ್ರುಗಳಿಗಿಂತ ಹಿತ ಶತ್ರುಗಳು ಬಹಳ ಅಪಾಯಕಾರಿ. ಇಲ್ಲಿ ಸ್ವತಃ ಬಿಜೆಪಿಗರೇ ಯಡಿಯೂರಪ್ಪನವರ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಮೋದೀಜೀ ಹಾಗು ಅಮಿತ್ ಶಾಹ ಏನೇ ತಂತ್ರ ಗಾರಿಕೆ ಹೂಡಿದರೂ ಸಿದ್ದರಾಮಯ್ಯ ಅದಕ್ಕೆ ಪ್ರತಿ ತಂತ್ರ ಹೂಡಿ ತನ್ನ ಚಾಣಕ್ಯ ನೀತಿಯನ್ನು ತೋರಿಸಿದ್ದಾರೆ. ಅದಕ್ಕೆ ಒಂದೇ ಒಂದು ಉದಾಹರಣೆ ಅಂದರೆ ಕರಾವಳಿಯಲ್ಲಿ ಹಿಂದು ತಂತ್ರದ ಬಿಜೆಪಿಗೆ ಉತ್ತರವಾಗಿ ಉತ್ತರ ಕರ್ನಾಟಕದಲ್ಲಿನ ಯಡಿಯೂರಪ್ಪನವರ ಲಿಂಗಾಯಿತ ಓಟ್ ಬ್ಯಾಂಕನ್ನು ತನ್ನತ್ತ ಸೆಳೆದುಕೊoಡದ್ದು ಇಡೀ ದೇಶಕ್ಕೆ ತಿಳಿದ ವಿಷಯ. ಇನ್ನು ಒಕ್ಕಲಿಗ ವೀರಶೈವರು ಏನೇ ಬೊಬ್ಬೆ ಹೊಡೆದರೂ ಅವರು ಬಿ ಜೆಪಿ , ಜೆ ಡಿ ಎಸ್ ನತ್ತ ಒಡೆದು ಹಂಚಿ ಹೋಗಿರುವುದು ಕಾಂಗ್ರೆಸ್ ಗೆ ವರದಾನ. ಶ್ರೀ ಸಿದ್ದರಾಮಯ್ಯನವರ ರಾಜ್ಯದಲ್ಲಿನ ಸಾಮಾಜಿಕ ಯೋಜನೆಗಳು ಹಾಗು ಹೋದಲೆಲ್ಲ ಜೆ ಡಿಎಸ್ ಗೆ ವೋಟ್ ಅಂದರೆ ಬಿಜೆಪಿಗೆ ವೋಟ್ ಎನ್ನುವ ಕಾರ್ಯತಂತ್ರ ನಿಜಕ್ಕೂ ಬಿ ಜೆ ಪಿ ಗೆ ದಿಗಿಲು ಹುಟ್ಟಿಸಿದೆ. ಇದು ಕರ್ನಾಟಕದಲ್ಲಿ ನಡೆದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಸಾಭೀತಾಗೀದೇ. ಕಾಂಗ್ರೆಸ್ ಲಿಂಗಾಯಿತ ವೀರಶೈವ ರನ್ನು ವಿಭಜಿಸಿದ್ದು ತಪ್ಪಾದರೆ ಕರಾವಳಿಯಲ್ಲಿ ಕೊಲೆಯಾದ ಎಲ್ಲಾ ಹಿಂದುಗಳನ್ನು ಕೋಮುಪ್ರಚೋದನೆಗೆ ಪ್ರಚೋದಿಸಿ ಕರಾವಳಿಯ ಶಾಂತಿ ಭಂಗಕ್ಕೆ ಕಾರಣವಾದದ್ದು ಬಿ ಜೆ ಪಿ ಗರ ತಪ್ಪೇ. ಅದಕ್ಕೆ ಬಿಜೆಪಿ ಗರು ಖಂಡಿತವಾಗಿ ಬೆಲೆ ತೆರಲೇ ಬೇಕು. ಎಲ್ಲಾ ಅಂಕಿ ಅಂಶಗಳನ್ನು ನೋಡುವಾಗ ಹಿಂದಿನ ಬಿ ಜೆ ಪಿ ಸರ್ಕಾರ ಇದ್ದಾಗೀನ ಕಚ್ಚಾಟ, ಗಲಾಟೆ , ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಖಂಡಿತಾ ಕಂಡು ಬಾರದಿದ್ದುದು ಕಾಂಗ್ರೆಸ್ ಗೆ ಮತ್ತೊಂದು ಪ್ಲಸ್ ಪೊಇಂಟ್. ಒಂದೊಮ್ಮೆ ಕಾಂಗ್ರೆಸ್ ಗೆದ್ದಲ್ಲಿ ಶ್ರೀ ಸಿದ್ದರಾಮಯ್ಯ ನವರು ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿಗೆ ಸವಾಲ್ ಆಗುವುದರಲ್ಲಿ ಸಂಶಯವೇ ಇಲ್ಲ. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಚುಕ್ಕಾಣಿ ಶ್ರೀ ಸಿದ್ದರಾಮಯ್ಯ ನವರೇ ಹಿಡಿದರೂ ಆಶ್ಚರ್ಯ ಪಡಬೇಕಿಲ್ಲ. ಕರ್ನಾಟಕ ದಲ್ಲಿನ ಕಾಂಗ್ರೇಸಿನ ಸ್ವಲ್ಪ ಮಟ್ಟಿನ ಪ್ರಾಬಲ್ಯ ಹೊಂದಿದ್ದ ಗೌರವಾನ್ವಿತ ರಾಜಕಾರಿಣಿ ಶ್ರೀ ವೀರಪ್ಪ ಮೊಯ್ಲಿ ಯವರು ಹಾಗು ಅವರ ಮಗ ಇತ್ತೀಚೆಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಎಡವಟ್ಟು ಮಾಡಿ ಕೊಂಡಿರುವುದು ಶ್ರೀ ಸಿದ್ದರಾಮಯ್ಯನವರಿಗೆ ಇನ್ನು ರಾಜ್ಯ ಕಾಂಗ್ರೆಸ್ ನಲ್ಲಿ ಸರಿ ಸಾಟಿ ಯಾರೂ ಇಲ್ಲದಂತಾಗಿದೆ. ಈ ಮದ್ಯೆ ಮದ್ಯಾಂತರದಲ್ಲಿ ಕಾಂಗ್ರೆಸಿನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಎದ್ದಾಗ ಅದನ್ನೂ ಅನಾಯಸವಾಗಿ ನಿಭಾಯಿಸಿದ್ದು ಶ್ರೀ ಸಿದ್ಧರಾಮಯ್ಯನವರ ಕಾರ್ಯ ಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ವಲಸಿಗ ಮತ್ತು ಮೂಲ ಕಾಂಗ್ರೆಸಿಗ ಕೂಗು ಏದ್ದಾಗಲೂ ದ್ರತೀ ಕೆಡದ ಸಿದ್ಧರಾಮಯ್ಯ ಅದನ್ನು ನಿವಾಳಿಸಿ ತ್ರಿವಿಕ್ರಮನಂತೆ ಕಾಂಗ್ರೇಸಿನಲ್ಲಿ ಬೆಳದದ್ದು ಕರ್ನಾಟಕ ಜನತೆ ತಿಳಿದಿರುವ ವಿಚಾರ. ಇನ್ನೂ ಮುoದಕ್ಕೆ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸಿಗರನ್ನು ಗುರಿಯಾಗಿಸಿ ಐಟಿ ದಾಳಿಗಳು ಜನತೆ ಬಿ ಜೆ ಪಿ ಯನ್ನು ಸoಶಯದಿಂದ ನೋಡುವಂತಾಗಿದೇ. ಅಲ್ಲದೆ ಬಿ ಜೆ ಪಿ ಯ ರಾಜ್ಯದಲ್ಲಿ ನಡೆದ ಸಮಾವೇಶಗಳಲ್ಲಿ ಎಲ್ಲಿಯೂ ಬಿ ಜೆ ಪಿ ಜನರ ಮೂಲಭೂತ ಸೌಕರ್ಯಗಳ ಬಗ್ಗೆ ದ್ವನಿ ಎತ್ತಿಲ್ಲ. ಬಿ ಜೆ ಪಿ ಯ ಪ್ರತಿ ಸಮಾವೇಶಗಳಲ್ಲಿ ಹಿಂದು ಮುಸ್ಲಿಮ್ ಎನ್ನುವ ಪದಗಳ ಬಳಕೆಗಳೇ ಎದ್ದು ತೋರುತಿತ್ತು. ಎಸ್ ಸಿ , ಎಸ್ ಟಿ , ಓ ಬಿ ಸಿ , ಅಲ್ಪ ಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿ ಜೆ ಪಿ ಎಲ್ಲೂ ತುಟಿ ಬಿಚ್ಚಲಿಲ್ಲ. ಅಲ್ಲದೆ ಬಿ ಜೆ ಪಿ ರಾಜ್ಯದಲ್ಲಿ ತನ್ನಲ್ಲೇ ಸಾಕಸ್ಟು ಮಂದಿ ಭ್ರಸ್ಟರನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಲ್ಲಿನ ಭ್ರಸ್ಟರಿಗಾಗಿ ತಡಕಾಡುವುದು ತಮಾಷೆ ಎನಿಸಿದೆ. ಇನ್ನು ಜೆ ಡಿ ಎಸ್ ನಲ್ಲಿ ಅಪ್ಪ ಮಗ ಹೋದ ಹೋದಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ಜನತೆಯೇ ವ್ಯಂಗವಾಡುತ್ತಿದ್ದಾರೆ. ಶ್ರೀ ದೇವೇಗೌಡರ ದ್ರತರಾಸ್ಟ್ರ ಪ್ರೇಮದಿಂದಾಗಿ ಪಕ್ಷದಲ್ಲಿನ ಪ್ರಮುಖರು ಪಕ್ಷ ಬಿಡುತ್ತಿದ್ದಾರೆ. ಸ್ವತ ರೇವಣ್ಣನವರ ಮಗನ ಪಕ್ಷದ ಟಿಕೆಟ್ ಗಾಗಿನ . ಪುಂಡಾಟ ಪಕ್ಷಕ್ಕೆ ಹಿನ್ನಡೆಯಾಗಿ ಪಕ್ಷ ಅತ್ತ ಮೂರಕ್ಕೂ ಏರದೆ ಇತ್ತ ಒಂದಕ್ಕೂ ಇಳಿಯದೆ ಅತಂತ್ರ ಸ್ತಿತಿಯಲ್ಲಿದೆ . ಇದೆಲ್ಲ ನೋಡುವಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ರಾಸ್ಟ್ರ ರಾಜಕಾರಣಕ್ಕೆ ಕಾಂಗ್ರೆಸ್ ನ ಮೂಲಕ ಕನ್ನಡಿಗರೊಬ್ಡರ ಪ್ರವೇಶವಾಗಲೂಬಹುದು . ಇತ್ತ ಯಡಿಯೂರಪ್ಪನವರ ರಾಜಕೀಯ ಜೀವನ ಬಹುತೇಕ ಮುಗಿಯಬಹುದು.

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ
ನವೀ ಮುoಬೈ

Leave a Reply

Your email address will not be published. Required fields are marked *

Skip to toolbar