ದೇವಾಡಿಗ ಸಂಘ ಮುoಬೈ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನ ದ ಆಚರಣೆ .

ದೇವಾಡಿಗ ಸಂಘ ಮುoಬೈ ಯ ಮಹಿಳಾ ವಿಭಾಗದವರಿಂದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವು ಶ್ರೀಮತಿ ಕುಸುಮಾ ದೇವಾಡಿಗ, ಜಯಂತಿ ದೇವಾಡಿಗ, ನಳಿನಿ ದೇವಾಡಿಗರ ಪ್ರಾರ್ಥನೆಯೊಂದಿಗೆ ದಾದರ್ ನ ದೇವಾಡಿಗ ಸೆಂಟರ್ ನಲ್ಲಿ ಪ್ರಾರoಭಗೊoಡಿತು. ಮಹಿಳಾ ಕಾರ್ಯಾಧ್ಯಕ್ಷೇ ಶ್ರೀಮತಿ ಜಯಂತಿ ಮೊಯಿಲಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ, ಯುವ ವಿಭಾಗದ ಮಾರ್ಗದರ್ಶಿ ಪ್ರವೀಣ್ ನಾರಾಯಣ್, ಸಿಟಿ ವಲಯದ ಕಾರ್ಯಾಧ್ಯಕ್ಷ ಹೇಮನಾಥ ದೇವಾಡಿಗರನ್ನು ಅಲ್ಲದೆ ನೆರೆದಿದ್ದ ಎಲ್ಲಾ ಮಹಿಳೆಯರಿಗೆ ಸ್ವಾಗತ ಕೋರಿದರು. ಉಪಕಾರ್ಯಾಧ್ಯಕ್ಷೇ ಸುರೇಖಾ ದೇವಾಡಿಗರು ಜಾಗತಿಕ ಮಹಿಳಾ ದಿನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.

ಇಂಡಸ್ ಹೆಲ್ತ್ ನ ಹೇಮಾಂಗಿ ಪಾಟೀಲರು ಆರೋಗ್ಯವನ್ನು ಕಾಪಾಡಿಕೊಳ್ಳುವ ಪೂರ್ವ ಮಾಹಿತಿಯನ್ನು ಸಾಕ್ಷ್ಯ ಚಿತ್ರದ ಮೂಲಕ ತೋರಿಸಿ ಅದರ ಉಪಯುಕ್ತ ವಿವರಣೆ ನೀಡಿದರೆ , ಅದಕ್ಕೆ ಪೂರಕವಾಗಿ ನಮ್ಮವರೆ ಆದ ಡಾಕ್ಟರ್ ರೇಖಾ ದೇವಾಡಿಗರು ಮಹಿಳೆಯರ ಆಹಾರ ಪದ್ದತಿ, ಆರೋಗ್ಯದ ಕಾಳಜಿ ಬಗ್ಗೆ ವಿವರಿಸಿ ಈಗಿನ ತ್ವರಿತಕರ ಜೀವನದಲ್ಲಿ ಫಾಸ್ಟ್ ಫುಡ್ , ಕೋಕ್ , ಪೆಪ್ಸಿ ಇಂತಹ ಯೇರಿಯೇಟಡ್ ಪಾನೀಯಗಳ, ಬರ್ಜರ್ ಪಿಜ್ಜಾ ದಂತ ಕೊಬ್ಬು ಭರಿತ ತಿನಿಸುಗಳ ಕಡೆ ಮಾರು ಹೋಗದೆ ನಮ್ಮ ಭಾರತೀಯ ಅಹಾರ ಪದ್ದತಿಯನ್ನು ಹೆಚ್ಚು ಬಳಕೆ ಮಾಡುವಂತೆ ನೆರೆದಿದ್ದ ಮಹಿಳೆಯರಿಗೆ ಹಿತವಚನ ನೀಡಿದರು. ಅಲ್ಲದೆ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವಂತೆ ಆಗ್ರಹಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಡಿ ದೇವಾಡಿಗರು ” ಖಿನ್ನತೆ, ಭಾವೋದ್ವೇಗ , ಸ್ವಾತಂತ್ರ್ಯ ” ದ ಬಗ್ಗೆ ತಿಳಿ ಹೇಳುತ್ತಾ ಮಹಿಳೆಯರ ಮಾನಸಿಕ ಮತ್ತು ದೈಹಿಕ ಒತ್ತಡದ ಬಗ್ಗೆ ಯಾವ ರೀತಿ ಜಾಗರೂಕರಾಗಿರಬೇಕು ಮತ್ತು ಹೇಗೆ ನಿಯಂತ್ರಣದಲ್ಲಿಡಬೇಕೆoದು ಕೂಲಂಕುಷವಾಗಿ ವಿವರಣೆ ನೀಡಿದರು. ಮಾರ್ಚ್ ತಿಂಗಳ ಯಶಸ್ವಿ ಮಾಸ ಪತ್ರಿಕೆಯ ಮುಖ ಪುಟದಲ್ಲಿ ಅಚ್ಚಾದ ತಮ್ಮ ಜೀವನ ಅಲ್ಲದೆ ದೇವಾಡಿಗ ಸಂಘ ಮುoಬೈಯ ಪ್ರಸಕ್ತ ವರ್ಷದಲ್ಲಿ ಉನ್ನತಿಗೆ ಕಾರಣರಾದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರನ್ನು ಮಹಿಳಾ ಕಾರ್ಯಧ್ಯಕ್ಷೇ ಜಯಂತಿ ಮೊಯಿಲಿಯವರು ಹೂಗುಚ್ಛ ನೀಡಿ ಗೌರವಿಸಿದರು. ಅವರ ಸಾಧನೆಯನ್ನು ಬಿoಬಿಸಿದ ಯಶಸ್ವಿ ಮಾಸ ಪತ್ರಿಕೆಯ ಪ್ರತಿಗಳನ್ನು ಸಾಂಕೇತಿಕವಾಗಿ ಬಿಡುಗಡೆ ಗೊಳಿಸಿದರು.


ಇತ್ತೀಚೆಗೆ ಥಾಯ್ಲಾಂಡಿನಲ್ಲಿ ಜರುಗಿದ ಮಾಸ್ಟರ್ ಅತ್ಲೇಟಿಕ್ ಚಾoಪೀಯನ್ ಶಿಪ್ 3 ಚಿನ್ನ ಮತ್ತು 2 ಬೆಳ್ಳಿ ಪದಕ ವಿಜೇತರಾದ ಶ್ರೀಮತಿ ಜಯಂತಿ ಎಮ್ ದೇವಾಡಿಗರನ್ನು ಸನ್ಮಾನಿಸಲಾಯಿತು. ಕನ್ನಡ ಹಾಗು ತುಳು ಗೀತೆಗಳನ್ನು ಶ್ರೀಮತಿ ಜಯಶ್ರೀ ಅತ್ತಾವರ , ಅಮಿತಾ ರಾವ್ ಹಾಗು ಸುಮನ್ ದೇವಾಡಿಗರು ಸುಶ್ರಾವ್ಯವಾಗಿ ಹಾಡಿದರು. ಈ ಕಾರ್ಯಕ್ರಮದಲ್ಲಿ ಸಾದರ ಪಡಿಸಿದ ಒಂದು ನಿಮಿಷ ಆಟ ಸ್ಪರ್ಧೆಯಲ್ಲಿ ಶ್ರೀಮತಿ ಪ್ರಭಾ ದೇವಾಡಿಗ , ಸುಜಾತ ಶೇರಿಗಾರ್ , ಮಮತಾ ದೇವಾಡಿಗ, ವನಿತಾ ದೇವಾಡಿಗ , ಸುಜಾತ ದೇವಾಡಿಗ, ರೇಖಾ ದೇವಾಡಿಗ, ಭಾರತಿ ಶೇರಿಗಾರ್ ,ಮತ್ತು ಲತಾ ಶೇರಿಗಾರ್ ವಿಜೇತರಾದರು. ಸಂಜೆಯ ಲಘು ಉಪಹಾರದ ವ್ಯವಸ್ಥೆಯನ್ನು ದಾದರ್ ನ ಸಾಯಿ ಸರಸ್ವತಿ ಹೊಟೇಲ್ ನ ಮಾಲಕರಾದ ಶ್ರೀ ಉಚ್ಚಿಲ ಸದಾಶಿವ ಮೊಯಿಲಿಯವರು ಪ್ರಾಯೋಜಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಿಟಿ ವಲಯದ ಯುವ ವಿಭಾಗದ ಕಾರ್ಯಾಧ್ಯಕ್ಷ ನಿತೇಶ್ ದೇವಾಡಿಗ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಸಮರ್ಪಣೆಯನ್ನು ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೇ ಶ್ರೀಮತಿ ರಂಜಿನಿ ಮೊಯಿಲಿ ಮತ್ತು ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಮಾಡಿದರು.

 

Leave a Reply

Your email address will not be published. Required fields are marked *

Skip to toolbar